ADVERTISEMENT

ಗೆಳತಿಗೆ ಪ್ರಪೋಸ್‌ ಮಾಡಿದ ವಿಜಯ್ ಮಲ್ಯ ಮಗ ಸಿದ್ದಾರ್ಥ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2023, 9:25 IST
Last Updated 2 ನವೆಂಬರ್ 2023, 9:25 IST
<div class="paragraphs"><p> ಸಿದ್ದಾರ್ಥ್‌ ಮಲ್ಯ ಮತ್ತು ಗೆಳತಿ ಜಾಸ್ಮಿನ್‌</p></div>

ಸಿದ್ದಾರ್ಥ್‌ ಮಲ್ಯ ಮತ್ತು ಗೆಳತಿ ಜಾಸ್ಮಿನ್‌

   

(Insta/sidmallya)

ಲಾಸ್‌ ಏಜಂಲೀಸ್‌: ಹಾಲೋವಿನ್‌ ಪಾರ್ಟಿ ವೇಳೆ ಗೆಳತಿಗೆ ಪ್ರಪೋಸ್‌ ಮಾಡುವ ಮೂಲಕ ಉದ್ಯಮಿ ವಿಜಯ್‌ ಮಲ್ಯ ಮಗ ಸಿದ್ದಾರ್ಥ್‌ ಮಲ್ಯ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಈ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಹಾಲೋವಿನ್‌ ಕಾಸ್ಟೂಮ್‌ನಲ್ಲಿಯೇ ಗೆಳತಿ ಜಾಸ್ಮಿನ್‌ಗೆ ಪ್ರಪೋಸ್‌ ಮಾಡಿರುವ ಫೋಟೊಗಳನ್ನು ಸಿದ್ದಾರ್ಥ್‌ ಹಂಚಿಕೊಂಡಿದ್ದಾರೆ. ಸಿದ್ದಾರ್ಥ್‌ ಪ್ರೀತಿಗೆ ಜಾಸ್ಮಿನ್‌ ಒಪ್ಪಿಗೆ ಸೂಚಿಸಿದ್ದು, ಉಂಗುರ ಬದಲಾಯಿಸಿಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿರುವ ಸಿದ್ದಾರ್ಥ್‌, ಲಂಡನ್ ಮತ್ತು ದುಬೈನಲ್ಲಿ ಹೆಚ್ಚಿನ ಸಮಯ ಕಳೆದಿದ್ದರು. ಲಂಡನ್‌ನ ವೆಲ್ಲಿಂಗ್‌ಟನ್ ಕಾಲೇಜು ಮತ್ತು ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಸಿದ್ದಾರ್ಥ್‌ ರಾಯಲ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮ ಕಾಲೇಜಿನಲ್ಲಿಯೂ ಅಧ್ಯಯನ ಮಾಡಿದ್ದರು.

ವ್ಯಾಸಂಗದ ನಂತರ ನಟನೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಪ್ರಾರಂಭ ಮಾಡಿದ್ದ ಸಿದ್ದಾರ್ಥ್‌, ಹಲವಾರು ಟಿವಿ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿದ್ದರು.

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಯೊಂದಿಗೆ ಡೇಟಿಂಗ್ ನಡೆಸುತ್ತಿರುವ ವಿಷಯಕ್ಕೆ ಸಿದ್ದಾರ್ಥ್‌ ಬಾರಿ ಸುದ್ದಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.