ADVERTISEMENT

ಹಿಂದಿಯಲ್ಲಿ ಶಾಹಿದ್ ಕಪೂರ್ ಜೊತೆ ನಟಿಸಲು ಅಣಿಯಾದ ವಿಜಯ್ ಸೇತುಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2021, 5:21 IST
Last Updated 2 ಆಗಸ್ಟ್ 2021, 5:21 IST
ಶಾಹಿದ್ ಕಪೂರ್ ಮತ್ತು ವಿಜಯ್ ಸೇತುಪತಿ
ಶಾಹಿದ್ ಕಪೂರ್ ಮತ್ತು ವಿಜಯ್ ಸೇತುಪತಿ   

ಬೆಂಗಳೂರು; ತಮಿಳು ನಟ ವಿಜಯ್ ಸೇತುಪತಿ ಅವರು ಬಾಲಿವುಡ್‌ನ ಶಾಹಿದ್ ಕಪೂರ್ ಜೊತೆ ನಟಿಸಲು ಅಣಿಯಾಗಿದ್ದಾರೆ.

ಹಿಂದಿಯ ‘ಗೊ ಗೋವಾ ಗೋನ್’, ‘ಹ್ಯಾಪಿ ಎಂಡಿಂಗ್’ಖ್ಯಾತಿಯ ರಾಜ್ ಆ್ಯಂಡ್ ಡಿಕೆ (ರಾಜ್ ನಿಧಿಮೋರು ಮತ್ತು ಕೃಷ್ಣ ಡಿಕೆ) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಥ್ರಿಲ್ಲರ್ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸುವುದು ಪಕ್ಕಾ ಆಗಿದೆ‌.

ಈ ವಿಷಯವನ್ನು ರಾಜ್ ಆ್ಯಂಡ್ ಡಿಕೆ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ' Makkal Selvan in da House'' ಎಂದು ತಮ್ಮ ನಿರ್ದೇಶನದ ಸಿನಿಮಾಕ್ಕೆ ಸ್ವಾಗತ ಕೋರಿದ್ದಾರೆ. ಈ ಸಿನಿಮಾ ಅಮೇಜಾನ್ ಫ್ರೈಮ್‌ಗಾಗಿ ನಿರ್ಮಾಣವಾಗುತ್ತಿದೆ.

ADVERTISEMENT

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶಾಹಿದ್ ಕಪೂರ್, ರಾಶಿ ಕನ್ನಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ರಾಶಿ ಕನ್ನಾ ಹಾಗೂ ಶಾಹಿದ್ ಕಪೂರ್ ವಿಜಯ್ ಸೇತುಪತಿಯವರನ್ನು ಸ್ವಾಗತಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.