ADVERTISEMENT

ಡಾ. ವಿಷ್ಣುವರ್ಧನ್‌ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡುವಂತೆ ಅನಿರುದ್ಧ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2025, 16:09 IST
Last Updated 17 ಜುಲೈ 2025, 16:09 IST
<div class="paragraphs"><p>ಸಿದ್ದರಾಮಯ್ಯ&nbsp;&nbsp;ಅವರನ್ನು ಭೇಟಿ ಮಾಡಿದ&nbsp; ಅನಿರುದ್ಧ</p></div>

ಸಿದ್ದರಾಮಯ್ಯ  ಅವರನ್ನು ಭೇಟಿ ಮಾಡಿದ  ಅನಿರುದ್ಧ

   

(ಚಿತ್ರ –ಇನ್‌ಸ್ಟಾಗ್ರಾಮ್‌)

ಬೆಂಗಳೂರು: ದಿವಂಗತ ನಟ ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಅವರ ಅಳಿಯ ಅನಿರುದ್ಧ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅವರು ಮನವಿ ಪತ್ರ ನೀಡಿದ್ದಾರೆ.

ADVERTISEMENT

ಪತ್ರದಲ್ಲಿ ಏನಿದೆ?

'ನಾನು ಈ ಪತ್ರವನ್ನು ಸಾಹಸಸಿಂಹ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಕನ್ನಡಿಗರ ಹೃದಯಸಿಂಹಾಸನದಲ್ಲಿ ಸದಾ ಸ್ಥಾನ ಪಡೆದ ದಿಗ್ಗಜ ನಟರಾದ ಡಾ. ವಿಷ್ಣುವರ್ಧನ್ ಅವರ ಕೋಟ್ಯಂತರ ಅಭಿಮಾನಿಗಳ ಪರವಾಗಿ, ಗೌರವದೊಂದಿಗೆ ಹಾಗೂ ಹೃದಯಪೂರ್ವಕ ಮನವಿಯೊಂದಿಗೆ ಬರೆಯುತ್ತಿದ್ದೇನೆ. ಕನ್ನಡ ಚಲನಚಿತ್ರರಂಗಕ್ಕೂ ಮತ್ತು ನಮ್ಮ ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ಅವರು ನೀಡಿರುವ ಕೊಡುಗೆ ಅಪರೂಪ ಹಾಗೂ ಅಪಾರ. ಅವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿದ ರೀತಿ ಕೂಡ ಅನೇಕರಿಗೆ ಪ್ರೇರಣೆ'.

ಅವರು ನಾಯಕನಟನಾಗಿ 225ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ಅವರು ನಮ್ಮನ್ನು ಭೌತಿಕವಾಗಿ ಆಗಲಿ 15 ವರ್ಷಗಳು ದಾಟಿದರೂ, ಜನರ ಹೃದಯದಲ್ಲಿ ಅವರು ಹೊಂದಿರುವ ಸ್ಥಾನ ಮಾತ್ರ ಅಚಲವಾಗಿದೆ. ಆದರೆ, ಇದುವರೆಗೆ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಕೂಡ ದೊರಕಿಲ್ಲ. ನಮ್ಮ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿಯೂ ಇವರಿಗೆ ಕನಿಷ್ಟಪಕ್ಷ ಮರಣೋತ್ತರವಾಗಿಯಾದರೂ ಇನ್ನೂ ಲಭಿಸಿಲ್ಲ ಎಂಬುದು ವಿಷಾದನೀಯ.

ಈ ವರ್ಷದ ಸೆಪ್ಟೆಂಬ‌ರ್ 18 ರಂದು ಅವರ 75ನೇ ಜನ್ಮವಾರ್ಷಿಕೋತ್ಸವವಿದೆ. ಈ ವಿಶೇಷ ಸಂದರ್ಭದಲ್ಲಿ, ಅವರ ಅಪಾರ ಸಾಧನೆಗಳನ್ನು ಗೌರವಿಸಿ, ಅಭಿಮಾನಿಗಳ ಹಿತೈಷಿಗಳ ಇಚ್ಛೆ ಈಡೇರಿಸುವಂತೆ, ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನೀಡಬೇಕೆಂಬ ಮನವಿ ಇದಾಗಿದೆ. ನಮ್ಮವರನ್ನು ಗೌರವಿಸುವುದು ಅಂದರೆ-ನಮ್ಮ ಗುರುತನ್ನು, ಬೇರುಗಳನ್ನು ಮತ್ತು ಬುನಾದಿಯನ್ನು ಗೌರವಿಸುವುದು. ಅವರ ಸಾಧನೆಗಳನ್ನು ನಾವು ಸ್ಮರಿಸಿದರೆ. ಅದು ನಾವು ನಮನ್ನೇ ಗೌರವಿಸುವಂತಾಗುತ್ತದೆ. ಈ ಕನಸು ನನಸಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.