ರಂಗಭೂಮಿ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ ಪ್ರಸಿದ್ಧಿ ಪಡೆದಿರುವ ಉಮಾಶ್ರೀ ಇದೇ ಮೊದಲ ಬಾರಿಗೆ ಯಕ್ಷಗಾನ ರಂಗಸ್ಥಳದಲ್ಲಿ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿದ್ದಾರೆ. ಹೊನ್ನಾವರದ ಸೈಂಟ್ ಆಂಟನಿ ಮೈದಾನದಲ್ಲಿ ಜ.17ರ ಶುಕ್ರವಾರ ರಾತ್ರಿ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯ ಯಕ್ಷಗಾನದಲ್ಲಿ ವಿಶೇಷ ಅತಿಥಿ ಕಲಾವಿದೆಯಾಗಿ ಭಾಗಿಯಾಗಿದ್ದಾರೆ. ಶ್ರೀ ರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಹಾಸ್ಯಗಾರರು ನಿಭಾಯಿಸುವ ಮತ್ತು ಸವಾಲು ಕೂಡ ಇರುವ ಕ್ಲಿಷ್ಟಕರ ಪಾತ್ರ ಮಂಥರೆಯ ಪಾತ್ರದಲ್ಲಿ ಉಮಾಶ್ರೀ ಮಾತು, ಅಭಿನಯಕ್ಕೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ. ಮೇಳದ ಸ್ತ್ರೀವೇಷಧಾರಿ ಸುಬ್ರಹ್ಮಣ್ಯ ಯಲಗುಪ್ಪ ಕೈಕೇಯಿ ಹಾಗೂ ಉಮಾಶ್ರೀ ಮಂಥರೆ ಪಾತ್ರಗಳ ಸಂವಾದ ಗಮನ ಸೆಳೆದಿದೆ. ಯಕ್ಷಗಾನ ರಂಗದಲ್ಲಿ ಹೆಜ್ಜೆ ಹಾಕುವ ಮೊದಲು ಉಮಾಶ್ರೀ ಅವರು ಬೆಂಗಳೂರಿನಲ್ಲಿ ಯಕ್ಷಗಾನದ ಹಾಡು, ಕುಣಿತದ ಅಭ್ಯಾಸ ಮಾಡಿಕೊಂಡಿದ್ದರು ಎಂಬುದು ಗಮನಿಸಬೇಕಾದ ವಿಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.