ADVERTISEMENT

ಆಲಿಯಾ, ರಣಬೀರ್‌ಗೆ ನಟಿ ದೀಪಿಕಾ ಪಡುಕೋಣೆ ಕೊಟ್ಟ ಉಡುಗೊರೆ ಏನು?

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 5:48 IST
Last Updated 18 ಏಪ್ರಿಲ್ 2022, 5:48 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಮುಂಬೈ: ಬಾಲಿವುಡ್‌ನ ನವದಂಪತಿ ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ ಅವರಿಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಅವರು ದುಬಾರಿ ಬೆಲೆಯ ಉಡುಗೋರೆ ನೀಡಿದ್ದಾರೆ.

ಆಲಿಯಾ ಮತ್ತು ರಣಬೀರ್‌ಗೆ ದೀಪಿಕಾ ₹ 15 ಲಕ್ಷ ಮೌಲ್ಯದ ಎರಡು ವಾಚ್‌ಗಳನ್ನು ಉಡುಗೋರೆ ನೀಡಿದ್ದಾರೆ. ಇನ್ನು ರಣವೀರ್‌ ಸಿಂಗ್‌ ಅವರು ₹ 80 ಲಕ್ಷ ಮೌಲ್ಯದ ಬೈಕ್‌ ಅನ್ನು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಲಿಯಾ, ರಣಬೀರ್‌ ಮದುವೆ ಕಾರ್ಯಕ್ರಮವನ್ನು ಪ್ರಚಾರ ಮಾಡಿದ್ದಮಾಧ್ಯಮಗಳು ಇದೀಗ ಮದುವೆಗೆ ಬಂದ ಗಿಫ್ಟ್‌ಗಳ ಬಗ್ಗೆಯೂ ವರದಿ ಮಾಡುತ್ತಿವೆ.

ADVERTISEMENT

ಕರೀನಾ ಕಪೂರ್‌, ಪ್ರಿಯಾಂಕಾಚೋಪ್ರಾ ಅವರು ಆಲಿಯಾಗೆ ಡೈಮಂಡ್‌ ನಕ್ಲೇಸ್‌ ನೀಡಿದ್ದಾರೆ ಎಂದು ವರದಿಯಾಗಿದೆ.

ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಿದ್ದರು.

ನೀತು ಕಪೂರ್, ಕರೀನಾ ಕಪೂರ್, ಮಹೇಶ್ ಭಟ್, ಸೋನಿ ರಜ್ದಾನ್, ಕರಿಷ್ಮಾ ಕಪೂರ್, ಕರಣ್ ಜೋಹರ್, ಅಯಾನ್ ಮುಖರ್ಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.