ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್
ಬೆಂಗಳೂರು: ಇಂದು (ಸೋಮವಾರ) ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ 50ನೇ ಜನ್ಮದಿನ. ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿ ಅಭಿಮಾನಿಗಳು ಭಾವಕರಾದರು.
ಚಿಕ್ಕ ವಯಸ್ಸಿನಲ್ಲಿಯೇ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ನಟನಿಗೆ ನಟನೆ ಒಲಿದ ಕಲಿಯೇ ಆಗಿತ್ತು. 'ಪ್ರೇಮದ ಕಾಣಿಕೆ'ಯಿಂದ 'ಜೇಮ್ಸ್' ಚಿತ್ರದವರೆಗೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತ ಬೆಳ್ಳಿ ಪರದೆಯ ಮೇಲೆ 'ರಾಜಕುಮಾರ‘ನಂತೆಯೇ ಕಂಗೊಳಿಸಿದ್ದ ನಕ್ಷತ್ರ 2021ರ ಅಕ್ಟೋಬರ್ 29 ರಂದು ಕಣ್ಮರೆಯಾಗಿತ್ತು.
ಸದಾ ನಗು, ಸರಳ ವ್ಯಕ್ತಿತ್ವ, ಮಾನವೀಯತೆ ಗುಣಗಳಿಗೆ ಹೆಸರಾಗಿದ್ದ ನಟ ಪುನೀತ್, ಅಭಿಮಾನಿಗಳಿಗೆ ಸೇರಿದಂತೆ ಸಿನಿರಂಗದವರಿಗೂ ಅಚ್ಚುಮೆಚ್ಚು.
ಪುನೀತ್ ಡಾನ್ಸ್, ಹಾಡು, ವರ್ಕೌಟ್ ಎಲ್ಲದಲ್ಲಿಯೂ ಸೈ ಎನ್ನಿಸಿಕೊಂಡಿದ್ದರು. ಫಿಟ್‌ನೆಸ್ ಬಗ್ಗೆ ಪುನೀತ್ ಗಮನಹರಿಸುತ್ತಿದ್ದರು. ಪುನೀತ್ ರಾಜ್ಕುಮಾರ್ ಅವರ ವರ್ಕೌಟ್ ವಿಡಿಯೊಗಳು ಇಲ್ಲಿವೆ..
2021 ಅಕ್ಟೋಬರ್ 29 ರಂದು ತೀವ್ರ ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ 46ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.