ADVERTISEMENT

ವಿಚ್ಛೇದನಕ್ಕೆ ಡ್ರೆಸ್ಸಿಂಗ್ ಕಾರಣವೇ? ನಟಿ ವಿದ್ಯುಲ್ಲೇಖಾ ಹೇಳಿದ್ದು ಏನು?

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 13:56 IST
Last Updated 5 ಅಕ್ಟೋಬರ್ 2021, 13:56 IST
ವಿದ್ಯುಲ್ಲೇಖಾ
ವಿದ್ಯುಲ್ಲೇಖಾ   

ತೆಲುಗಿನ ಹಾಸ್ಯ ನಟಿವಿದ್ಯುಲ್ಲೇಖಾ ರಾಮನ್ ಬಿಕಿನಿಯಲ್ಲಿ ಕಾಣಿಸಿಕೊಂಡು ನೆಟ್ಟಿಗರ ಟ್ರೋಲ್‌ಗೆ ಒಳಗಾಗಿದ್ದಾರೆ.

ವಿದ್ಯುಲ್ಲೇಖಾ ಇತ್ತೀಚೆಗೆ ಬಹುಕಾಲದ ಗೆಳೆಯ ಸಂಜಯ್‌ ಅವರನ್ನು ವಿವಾಹವಾಗಿದ್ದಾರೆ. ಕಳೆದ ವಾರಈ ಜೋಡಿ ಹನಿಮೂನ್‌ಗಾಗಿ ಮಾಲ್ಡೀವ್ಸ್‌ಗೆ ತೆರಳಿತ್ತು. ಹಳದಿ ಬಿಕಿನಿಯಲ್ಲಿರುವ ಚಿತ್ರವನ್ನುವಿದ್ಯುಲ್ಲೇಖಾ ಹಂಚಿಕೊಂಡಿದ್ದರು. ಹಾಗೇ ವರ್ಷಕ್ಕೆ ಎರಡು ಸಲ ಬೀಚ್‌ ಅಥವಾ ಪ್ರಕೃತಿ ಮಡಿಲಲ್ಲಿ ರಜೆಯನ್ನು ಆನಂದಿಸಬೇಕು ಎಂದು ಬರೆದುಕೊಂಡಿದ್ದರು.

ಕೆಲವು ನೆಟ್ಟಿಗರು ವಿದ್ಯುಲ್ಲೇಖಾ ಅವರ ಡ್ರೆಸ್ಸಿಂಗ್ ಶೈಲಿಯನ್ನು ಟೀಕಿಸಿ ಕಮೆಂಟ್‌ಗಳನ್ನು ಹಾಕಿದ್ದರು. ವಿಚ್ಛೇದನಕ್ಕೆ ಇಂತಹ ಉಡುಗೆಗಳು ಕೂಡ ಕಾರಣವಾಗಬಹುದು ಎಂದು ಕೆಲವರು ಕಾಲೆಳೆದಿದ್ದರು.

ADVERTISEMENT

'1920ರ ಅವಧಿ ಬಿಟ್ಟು 2021ಕ್ಕೆ ನಮ್ಮ ಮನಸ್ಥಿತಿ ಬದಲಾಗಬೇಕಿದೆ. ವಿಚ್ಛೇದನಕ್ಕೆ ಮಹಿಳೆಯ ಉಡುಗೆಯೇ ಕಾರಣವಾದರೆ, ತಮ್ಮ ವೈವಾಹಿಕ ಜೀವನದಲ್ಲಿ ಚೆನ್ನಾಗಿ ಮತ್ತು ಕ್ರಮಬದ್ಧವಾಗಿ ಬಟ್ಟೆಧರಿಸುವವರೆಲ್ಲರೂ ಸಂತೋಷವಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಾಮಾಣಿಕ ಗಂಡ ಸಿಕ್ಕಿರುವುದು ನನ್ನ ಅದೃಷ್ಟ,ಸಂಕುಚಿತ ವ್ಯಕ್ತಿತ್ವದ ಜನರನ್ನು ಬದಲಾಯಿಸಲು ಸಾಧ್ಯವಿಲ್ಲ, ಈ ಬಗ್ಗೆ ಹೆಚ್ಚು ಯೋಚಿಸಬಾರದು ಎಂದು ವಿದ್ಯುಲ್ಲೇಖಾ ಹೇಳಿದ್ದಾರೆ ಎಂದು ತೆಲುಗಿನ ’ಸಾಕ್ಷಿ’ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.