ADVERTISEMENT

ಅಭಿಮಾನಿಗಳಿಗೆ ಫಿಟ್‌ನೆಸ್ ಮಂತ್ರ ಹೇಳಿದ ನಟಿ ಮಂದಿರಾ ಬೇಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2021, 11:40 IST
Last Updated 20 ನವೆಂಬರ್ 2021, 11:40 IST
ಮಂದಿರಾ ಬೇಡಿ (ಇನ್‌ಸ್ಟಾಗ್ರಾಂ ಚಿತ್ರ)
ಮಂದಿರಾ ಬೇಡಿ (ಇನ್‌ಸ್ಟಾಗ್ರಾಂ ಚಿತ್ರ)   

ಮುಂಬೈ: ಬಾಲಿವುಡ್‌ ನಟಿ, ಕಿರುತೆರೆ ನಿರೂಪಕಿ ಮಂದಿರಾ ಬೇಡಿ ಅವರು ವರ್ಕೌಟ್‌ ಮಾಡುತ್ತಿರುವ ವಿಡಿಯೊವನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡುವ ಮಂದಿರಾ, ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾ ಬ್ಯುಸಿಯಾಗಿರುವ ವಿಡಿಯೊ ಒಂದನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ನಿಮ್ಮೆಲ್ಲರಿಗೂ ಶುಭೋದಯ. ಇವತ್ತು ನಾನು 33 ಬಾರಿ ಹ್ಯಾಂಡ್‌ಸ್ಟ್ಯಾಂಡ್‌ಗಳನ್ನು ಮಾಡಿದ್ದೇನೆ. ಧೈರ್ಯದಿಂದ ನೀವೂ ಕೂಡ ಪ್ರಯತ್ನಿಸಿ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.