ADVERTISEMENT

ಪ್ರಭಾಸ್‌ಗೆ ವಿಲನ್ ಆಗಲಿದ್ದಾರಾ ಸೈಫ್‌?

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 10:31 IST
Last Updated 20 ಆಗಸ್ಟ್ 2020, 10:31 IST
ಸೈಫ್ ಅಲಿ ಖಾನ್
ಸೈಫ್ ಅಲಿ ಖಾನ್   

ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಮುಂದಿನ ‘ಆದಿ ಪುರುಷ್’ ಸಿನಿಮಾದಲ್ಲಿ ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ನಟನೆಯ 21ನೇ ಸಿನಿಮಾದ ಬಗ್ಗೆ ಒಂದರ ಹಿಂದೆ ಒಂದರಂತೆ ಕುತೂಹಲಕಾರಿ ಅಂಶಗಳು ಹೊರಬೀಳುತ್ತಿವೆ. ಈಗ ಸದ್ಯ ಸುದ್ದಿಯ ಪ್ರಕಾರ ಸೈಫ್ ಪ್ರಭಾಸ್‌ಗೆ ಖಳನಾಯಕನಾಗಲಿದ್ದಾರಂತೆ.

ಇತ್ತೀಚೆಗೆ ಟಿ–ಸಿರೀಸ್ ಸಂಸ್ಥೆಯು ಆದಿಪುರುಷ್ ಸಿನಿಮಾವು ₹500 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎಂಬ ಮಾಹಿತಿಯನ್ನು ಹೊರ ಹಾಕಿದೆ. ಜಾಗತಿಕ ಮಟ್ಟದಲ್ಲಿ ಯಶಸ್ಸು ಗಳಿಸುವ ಗುರಿಯನ್ನು ಇರಿಸಿಕೊಂಡಿದೆ ಸಂಸ್ಥೆ.

ಸಿನಿಮಾ ಘೋಷಣೆಯಾದ ದಿನದಿಂದಲೂ ಖಳನಾಯಕ ಯಾರು ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡುತ್ತಿತ್ತು. ಸದ್ಯ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಅಲ್ಲದೇ ಸೈಫ್ ಅಲಿ ಖಾನ್ ಸಿನಿಮಾಕ್ಕೆ ಖಳನಾಯಕ ಎನ್ನುವುದು ಫಿಕ್ಸ್ ಆಗಿದೆಯಂತೆ. ಈ ಹಿಂದೆ ಸೈಫ್ ತಾನಾಜಿ ಸಿನಿಮಾದಲ್ಲೂ ಖಳನಾಯಕನಾಗಿ ನಟಿಸಿದ್ದರು. ಆದಿಪುರುಷ್ ಸಿನಿಮಾದ ನಿರ್ದೇಶಕ ಓಂ ರಾವತ್ ಖಳನಾಯಕನ ಪಾತ್ರಕ್ಕೆ ಸೈಫ್ ಅವರ ಹೆಸರನ್ನೇ ಸೂಚಿಸಿದ್ದಾರಂತೆ.ಅಲ್ಲದೇ ಸೈಫ್ ಕೂಡ ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ADVERTISEMENT

ಬಾಹುಬಲಿ ನಂತರ ಪ್ರಭಾಸ್ ಉತ್ತರ ಭಾರತದಲ್ಲಿ ಅಭಿಮಾನಿಗಳ ಬಳಗವನ್ನೇ ಹುಟ್ಟುಹಾಕಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.