ADVERTISEMENT

ವಿಜಯ್ ದೇವರಕೊಂಡ ಹೆಸರು ಬದಲು

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 19:30 IST
Last Updated 7 ಜನವರಿ 2020, 19:30 IST
'ವರ್ಲ್ಡ್ ಫೇಮಸ್ ಲವರ್' ಸಿನಿಮಾದ ಲುಕ್
'ವರ್ಲ್ಡ್ ಫೇಮಸ್ ಲವರ್' ಸಿನಿಮಾದ ಲುಕ್   

ಅರ್ಜುನ್‌ ರೆಡ್ಡಿ ಸಿನಿಮಾದ ಮೂಲಕ ಗಮನ ಸೆಳೆದ ನಟ ವಿಜಯ್ ದೇವರಕೊಂಡ ಅವರ ಮತ್ತೊಂದು ನಿರೀಕ್ಷಿತ ಸಿನಿಮಾ 'ವರ್ಲ್ಡ್ ಫೇಮಸ್ ಲವರ್' ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ವಿಜಯ್‌ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕಾಗಿ ವಿಜಯ್ ಹೆಸರು ಬದಲಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಕಾರ್ಡ್‌ನಲ್ಲಿ 'ದೇವರಕೊಂಡ ವಿಜಯ್ ಸಾಯಿ' ಎಂದು ಹೆಸರು ಬದಲಾಯಿಸಲಾಗಿದೆ. ಹಿಂದಿನ ಸಿನಿಮಾಗಳ ಸೋಲು ಹೆಸರು ಬದಲಾಗಲು ಕಾರಣ ಎನ್ನಲಾಗುತ್ತಿದೆ. ನೋಟಾ, ಟ್ಯಾಕ್ಸಿವಾಲಾ, ಡಿಯರ್‌ ಕಾಮ್ರೇಡ್‌ ಸೋಲಿನಿಂದ ಹೊರಬರಲು ವಿಜಯ್‌ ಹೆಸರು ಬದಲಾವಣೆಗೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅರ್ಜುನ್‌ ರೆಡ್ಡಿ ಮತ್ತು ಗೀತ ಗೋವಿಂದಂ ನಂತರ ಬಂದ ವಿಜಯ್‌ ಅಭಿನಯದ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸು ಗಳಿಸಿಲ್ಲ.

'ವರ್ಲ್ಡ್ ಫೇಮಸ್ ಲವರ್' ಟೀಸರ್‌ಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಅರ್ಜುನ್ ರೆಡ್ಡಿ' ಸಿನಿಮಾದ ಮಾದರಿಯಲ್ಲಿ ಈ ಸಿನಿಮಾದ ಟೀಸರ್ ಇದೆ ಎಂದು ಅನೇಕರು ಬೇಸರ ಹೊರಹಾಕುತ್ತಿದ್ದಾರೆ. ಯುಟ್ಯೂಬ್‌ನಲ್ಲಿಶನಿವಾರ ಬಿಡುಗಡೆಯಾದ ಟೀಸರ್ ಅನ್ನು 10ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.ಕ್ರಾಂತಿ ಮಾಧವ್ ಚಿತ್ರಕತೆ ಬರೆದು, ನಿರ್ದೇಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.