ADVERTISEMENT

Happy Birthday Yash: ಕೆಜಿಎಫ್‌ 2 ಪೋಸ್ಟರ್‌ ಬಿಡುಗಡೆ, ಅಭಿಮಾನಿಗಳಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 6:50 IST
Last Updated 8 ಜನವರಿ 2022, 6:50 IST
ಯಶ್‌
ಯಶ್‌   

ಕನ್ನಡ ಚಿತ್ರರಂಗಕ್ಕೆ ಅಂತರರಾಷ್ಟ್ರೀಯ ಪ್ರಸಿದ್ಧಿ ತಂದುಕೊಟ್ಟ ನಟ ರಾಕಿಂಗ್ ಸ್ಟಾರ್ ಯಶ್‌ ಅವರ ಕೆಜಿಎಫ್‌ 2 ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದೆ.

ಯಶ್‌ ಜನ್ಮದಿನವಾದ ಇಂದೇ (ಜ.8) ಪೋಸ್ಟರ್‌ ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಹೊಂಬಾಳೆ ಸಂಸ್ಥೆ ಹಾಗೂ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಹೊಸ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಖಡಕ್‌ ಲುಕ್‌ನಲ್ಲಿರುವ ಯಶ್‌ ಮುಂದೆ ಮಾರ್ಗ ಫಲಕವಿದ್ದು ಅದರಲ್ಲಿ ’ಎಚ್ಚರಿಕೆ...ಮುಂದೆ ಅಪಾಯವಿದೆ’ ಎಂಬ ಬರಹ ಇರುವ ಹೊಸ ಫೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದನ್ನು ಅಭಿಮಾನಿಗಳು ಕೂಡ ಶೇರ್‌ ಮಾಡುತ್ತಿದ್ದಾರೆ.

ADVERTISEMENT

ಕೆಜಿಎಫ್‌ 2 ಚಿತ್ರ ಏಪ್ರಿಲ್‌ 14ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಯಶ್‌ ಜನ್ಮದಿನಕ್ಕೆ ಸಿನಿಮಾರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.