ADVERTISEMENT

ನಟ ಹೃತಿಕ್ ರೋಷನ್, ಜೂನಿಯರ್ NTR ಅಭಿನಯದ 'ವಾರ್‌ 2' ಆಗಸ್ಟ್‌ 14ಕ್ಕೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 13:25 IST
Last Updated 16 ಮಾರ್ಚ್ 2025, 13:25 IST
<div class="paragraphs"><p>ಚಿತ್ರ ಕೃಪೆ: ಎಕ್ಸ್</p></div>
   

ಚಿತ್ರ ಕೃಪೆ: ಎಕ್ಸ್

ಮುಂಬೈ: ನಟ ಹೃತಿಕ್ ರೋಷನ್, ಜೂನಿಯರ್ ಎನ್‌ಟಿಆರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ 'ವಾರ್‌ 2' ಸಿನಿಮಾವು ಈ ವರ್ಷದ ಆಗಸ್ಟ್‌ 14ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ADVERTISEMENT

ಈ ಚಿತ್ರಕ್ಕೆ ಅಯಾನ್ ಮುಖರ್ಜಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ವಾರ್‌ ಚಿತ್ರದ ಭಾಗ–1ರಲ್ಲಿಯೂ ನಟಿಸಿದ್ದ ಹೃತಿಕ್‌ ರೋಷನ್‌, 2ನೇ ಭಾಗದಲ್ಲಿಯೂ ಮುಂದುವರಿದಿದ್ದಾರೆ. ಜತೆಗೆ ಜೂನಿಯರ್ ಎನ್‌ಟಿಆರ್‌ ಮತ್ತು ಕಿಯಾರಾ ಅಡ್ವಾನಿ ಸಹ ನಟಿಸಿದ್ದಾರೆ.

ವಾರ್–2 ಚಿತ್ರದ ಪ್ರಚಾರ ಆರಂಭಿಸುವ ಮೊದಲೇ ಅಭಿಮಾನಿಗಳು ತೆರೆ ಮೇಲೆ ಚಿತ್ರ ನೋಡುವ ಕಾತುರ ವ್ಯಕ್ತಪಡಿಸಿದ್ದಾರೆ. ಇದೇ ಆಗಸ್ಟ್ 14ರಂದು ನಿಮ್ಮ ಮುಂದೆ ವಾರ್‌–2 ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

2019ರಲ್ಲಿ ಬಿಡುಗಡೆಯಾದ ವಾರ್–1 ಚಿತ್ರದಲ್ಲಿ ನಟ ಟೈಗರ್ ಶ್ರಾಫ್ ನಟಿಸಿದ್ದರು.

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ಯಡಿ, 'ಪಠಾಣ್', 'ಟೈಗರ್ ವರ್ಸಸ್ ಪಠಾಣ್', ಮತ್ತು ಆಲಿಯಾ ಭಟ್ ಮತ್ತು ಶಾರ್ವರಿ ನಟಿಸಿದ ಮೊದಲ ಮಹಿಳಾ ಪ್ರಧಾನ ಚಿತ್ರ 'ವೈಆರ್‌ಎಫ್ ಸ್ಪೈ ಯೂನಿವರ್ಸ್ 'ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.