ADVERTISEMENT

ಯೋಗದಿಂದ ಮನಸ್ಸು ದೇಹದ ನಿಯಂತ್ರಣ ಸಾಧ್ಯ: ಸುಹಾಸಿನಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 6:59 IST
Last Updated 24 ಜೂನ್ 2020, 6:59 IST
ಸುಹಾಸಿನಿ
ಸುಹಾಸಿನಿ   

1980ರಲ್ಲಿ ತಮಿಳಿನ ‘ನೆಂಜಥೈ ಕಿಲ್ಲಾಥೆ’ ಮೂಲಕ ಸಿನಿರಂಗ ಪ್ರವೇಶಿಸಿದ ನಟಿ ಸುಹಾಸಿನಿ ಮಣಿರತ್ನಂ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಎವರ್‌ಗ್ರೀನ್‌ ನಟಿ. ಇಂದಿಗೂ ಬೇಡಿಕೆಯಲ್ಲಿರುವ ನಟಿ ಸುಹಾಸಿನಿ ದಕ್ಷಿಣದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಸಿನಿರಂಗದಲ್ಲಿರುವ ಈಕೆ ಇಂದಿಗೂ ಅದೇ ದೇಹಸಿರಿಯನ್ನು ಕಾಪಾಡಿಕೊಂಡು ಬಂದಿದ್ದಾರೆ.ಇಂದಿನ ಯಾವ ನಟಿಯರಿಗೂ ಕಡಿಮೆ ಇಲ್ಲದ ಆಕೆಯ ದೇಹಸಿರಿಗೆ ಮುಖ್ಯ ಕಾರಣ ಯೋಗ. ಪ್ರತಿದಿನ ಯೋಗಭಾಸ್ಯ ಮಾಡುವ ಆಕೆ ಆ ಮೂಲಕ ತಮ್ಮ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ.

58 ವಯಸ್ಸಿನಲ್ಲೂ 30ರ ತರುಣಿಯಂತೆ ಕಾಣುವ ಆಕೆ ಫಿಟ್‌ನೆಸ್‌ ಹಾಗೂ ಡಯೆಟ್ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದಾರೆ. ಪ್ರತಿದಿನ ಊಟದೊಂದಿಗೆ ತರಕಾರಿ ಸಲಾಡ್ ಸೇವಿಸುವ ಇವರು ಮನೆಯ ಊಟಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಆಗಾಗ ಜುಂಬಾ ನೃತ್ಯದಲ್ಲೂ ತೊಡಗುವ ಇವರು ಅದನ್ನೂ ಫಿಟ್‌ನೆಸ್‌ ಭಾಗವನ್ನಾಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಅಂತರರಾಷ್ಟ್ರೀಯ ಯೋಗ ದಿನದಂದು ವಿವಿಧ ಭಂಗಿಯ ಯೋಗಾಸಗಳನ್ನು ಮಾಡಿರುವ ಸುಹಾಸಿನಿ ಆ ವಿಡಿಯೊಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಮನಸ್ಸು–ದೇಹ ಹಾಗೂ ಮನುಷ್ಯ–ಪ್ರಕೃತಿಯ ನಡುವಿನ ಸೌಹಾರ್ದತೆ ಮೂಡಿಸಲು ಯೋಗದಿಂದ ಎಂದು ಬರೆದುಕೊಂಡಿದ್ದರು. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ದೇಹ–ಮನಸ್ಸು ಎರಡನ್ನು ನಿಯಂತ್ರಿಸಬಹುದು ಎನ್ನುವುದು ಸುಹಾಸಿನಿ ಮಾತು.

ADVERTISEMENT

ಇಂತಿಪ್ಪ ಸುಹಾಸಿನಿ ಮಲಯಾಳಂನ ‘ಲೂಸಿಫರ್‌’ ಸಿನಿಮಾದ ತೆಲುಗು ರಿಮೇಕ್‌ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಸುಜಿತ್ ನಿರ್ದೇಶನದ ಲೂಸಿಫರ್ ರಿಮೇಕ್‌ನಲ್ಲಿ ಚಿರಂಜೀವಿ ನಾಯಕನಾಗಿ ನಟಿಸುತ್ತಿದ್ದಾರೆ ಎಂಬುದು ಈಗಾಗಲೇ ಪಕ್ಕಾ ಆಗಿದೆ. ಆದರೆ ಮೂಲಗಳ ಪ್ರಕಾರ ಸುಹಾಸಿನಿ ಈ ಚಿತ್ರದಲ್ಲಿ ಮೆಗಾಸ್ಟಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ. 80ರ ದಶಕದ ಸೂಪರ್ ಹಿಟ್‌ ಜೋಡಿ ಮತ್ತೆ ಲೂಸಿಫರ್ ರಿಮೇಕ್ ಮೂಲಕ ತೆರೆ ಮೇಲೆ ಕಮಾಲ್ ಮಾಡುವುದು ಪಕ್ಕಾ ಎನ್ನುತ್ತಿವೆ ಮೂಲಗಳು. ಮಲಯಾಳಂನಲ್ಲಿ ಮಂಜು ವಾರಿಯರ್ ನಿರ್ವಹಿಸಿದ ಪಾತ್ರವನ್ನು ಸುಹಾಸಿನಿ ತೆಲುಗಿನಲ್ಲಿ ಮಾಡಲಿದ್ದಾರಂತೆ. ಚಿರಂಜೀವಿ ಹಾಗೂ ಚಿತ್ರತಂಡ ಸುಹಾಸಿನಿ ಜೊತೆ ಮಾತಕತೆ ನಡೆಸಿದಯಂತೆ. ಆದರೆ ಈಗ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.