ADVERTISEMENT

Sandalwood: ಇಂದು ‘ಯುವ ಸರ್ಕಾರ್‌’ ಟೀಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 23:30 IST
Last Updated 11 ಫೆಬ್ರುವರಿ 2026, 23:30 IST
ಯುವ ಸರ್ಕಾರ್‌ ಪೋಸ್ಟರ್‌ 
ಯುವ ಸರ್ಕಾರ್‌ ಪೋಸ್ಟರ್‌    

ಸಂತೋಷ್‌ ಕುಮಾರ್‌ ಆರ್‌.ಎಸ್‌. ನಿರ್ದೇಶನದ ‘ಯುವ ಸರ್ಕಾರ್‌’ ಸಿನಿಮಾದ ಟೀಸರ್‌ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಫೆ.12 ರ ಗುರುವಾರ ಬಿಡುಗಡೆ ಮಾಡಲಿದ್ದಾರೆ. 

ಪ್ಯಾಷನ್ ಮೂವಿ ಮೇಕರ್ಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ. ‘ತಾಯಿಯೊಬ್ಬಳು ತನ್ನ ಮಗನನ್ನು ಹಿಂಸೆ ಇಲ್ಲದ ಜೀವನ ನಡೆಸಲು ಕಲಿಸಿರುತ್ತಾಳೆ. ಆದರೆ ಆತ ದರೋಡೆ ಕೋರನಾಗುತ್ತಾನೆ. ನಾಯಕನನ್ನು ಅನುಯಾಯಿಗಳು ‘ರಾಬಿನ್‌ಹುಡ್‌’ ಎಂದು ಕರೆಯುತ್ತಾರೆ. ಪೊಲೀಸರು, ಸರ್ಕಾರ ಮತ್ತು ಅವನ ವಿರುದ್ಧ ಇರುವ ಇತರ ರಾಜಕಾರಣಿಗಳ ದಾಳಿಯಿಂದ ಅವನು ಬದುಕುಳಿಯಲು ಸಾಧ್ಯವಾಗುತ್ತದೆಯೇ ಎಂಬುವುದು ಯುವ ಸರ್ಕಾರ್ ಚಿತ್ರದ ಕಥೆಯಾಗಿದೆ’ ಎಂದಿದ್ದಾರೆ ಸಂತೋಷ್‌ ಕುಮಾರ್‌. 

ಚಿತ್ರಕ್ಕೆ ಮಾರ್ಟಿನ್‌ ಕ್ಲೆಮೆಂಟ್‌ ಸಂಗೀತ ನಿರ್ದೇಶನ, ಮ್ಯಾಥ್ಯೂ ರಾಜನ್‌ ಛಾಯಾಚಿತ್ರಗ್ರಹಣವಿದೆ. ವೀರೇನ್ ಕೇಶವ್ ನಾಯಕನಾಗಿ ನಟಿಸಿದ್ದು, ಅವರಿಗೆ ‘ಬಿಗ್‌ಬಾಸ್‌’ ಖ್ಯಾತಿಯ ಜಾಹ್ನವಿ ಜೋಡಿಯಾಗಿದ್ದಾರೆ. ಧರ್ಮ ಕೀರ್ತಿರಾಜ್, ಆಲ್ಫಿಯಾ ಶೇಖ್‌, ಶ್ರುತಿ ದೇಶಪಾಂಡೆ, ವೈ.ಜಿ.ಮಹೇಂದ್ರ, ರಿತ್ವಿಕಾ ಮತ್ತಿತರರು ತಾರಾಬಳಗದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.