ADVERTISEMENT

ಜೀವನದ ಮೌಲ್ಯ ಕಲಿಸಿದ ವಿಜಯಲಕ್ಷ್ಮಿ ಟೀಚರ್‌ ನನ್ನ ಗುರು..ನನ್ನ ಹೆಮ್ಮೆ: ಪುನೀತ್‌

‘ಪಿಕ್ಚರ್‌ ವಿದ್‌ ಟೀಚರ್‌’–ತಮ್ಮ ಗುರುಗಳೊಂದಿಗೆ ಇರುವ ಫೋಟೊ ಚಾಲೆಂಜ್‌ ಆರಂಭ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 9:24 IST
Last Updated 6 ಮಾರ್ಚ್ 2021, 9:24 IST
ತಮ್ಮ ಗುರುವಿನ ಜೊತೆ ಪುನೀತ್‌ ರಾಜ್‌ಕುಮಾರ್‌
ತಮ್ಮ ಗುರುವಿನ ಜೊತೆ ಪುನೀತ್‌ ರಾಜ್‌ಕುಮಾರ್‌   

ಬೆಂಗಳೂರು: ‘ಜೀವನದ ಮೌಲ್ಯ ಕಲಿಸಿದ ವಿಜಯಲಕ್ಷ್ಮಿ ಟೀಚರ್‌ ನನ್ನ ಗುರು..ನನ್ನ ಹೆಮ್ಮೆ..’ ಹೀಗೆ ತಮ್ಮ ಗುರುವನ್ನು ನೆನೆದವರು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌.

ಪುನೀತ್‌ ನಟನೆಯ ‘ಯುವರತ್ನ’ ಚಿತ್ರವು ಏ.1ರಂದು ಕನ್ನಡ ಹಾಗೂ ತೆಲುಗಿನಲ್ಲಿ ತೆರೆಯ ಮೇಲೆ ಬರುತ್ತಿದ್ದು, ಚಿತ್ರದ ‘ಪಾಠಶಾಲಾ’ ಹಾಡು ಎಲ್ಲರನ್ನೂ ಸೆಳೆದಿದೆ. ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಪುನೀತ್‌ ಈ ಚಿತ್ರದಲ್ಲಿ ನಟಿಸಿದ್ದು, ‘ಪಾಠಶಾಲಾ’ ಲಿರಿಕಲ್‌ ಹಾಡಿನ ಬಿಡುಗಡೆ ಬೆನ್ನಲ್ಲೇ, ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ‘ಪಿಕ್ಚರ್‌ ವಿದ್‌ ಟೀಚರ್‌’–ತಮ್ಮ ಗುರುಗಳೊಂದಿಗೆ ಇರುವ ಫೋಟೊ ಚಾಲೆಂಜ್‌ ಆರಂಭವಾಗಿದೆ.

ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ದೇಶಕ ಕಾರ್ತಿಕ್‌ ಗೌಡ ಅವರ ಸವಾಲು ಸ್ವೀಕರಿಸಿರುವ ಪುನೀತ್‌ ರಾಜ್‌ಕುಮಾರ್‌, ವಿಜಯಲಕ್ಷ್ಮಿ ಟೀಚರ್‌ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಜೊತೆಗೆ ನಟ ರಕ್ಷಿತ್‌ ಶೆಟ್ಟಿ, ಶ್ರೀಮುರುಳಿ ಹಾಗೂ ಯುವರತ್ನ ಚಿತ್ರದ ನಾಯಕಿ ಸಯೀಶಾ ಸೈಗಲ್‌ ಅವರನ್ನು ಪುನೀತ್‌ ನಾಮಿನೇಟ್‌ ಮಾಡಿದ್ದಾರೆ. ‘ನಿಮ್ಮ ನೆಚ್ಚಿನ ಶಿಕ್ಷಕರ ಜೊತೆಗಿರುವ ಫೋಟೊ ಹಾಕಿ ಮೂವರನ್ನು ನಾಮಿನೇಟ್‌ ಮಾಡಿ ಟ್ಯಾಗ್‌ ಮಾಡಿ’ ಎಂದು ಪುನೀತ್‌ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.