ADVERTISEMENT

ಬುರ್ಖಾ ಧರಿಸಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ ನಟಿ ಸಾಯಿ ಪಲ್ಲವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಡಿಸೆಂಬರ್ 2021, 10:15 IST
Last Updated 30 ಡಿಸೆಂಬರ್ 2021, 10:15 IST
ನಟಿ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ   

ಬೆಂಗಳೂರು: ನಟಿ ಸಾಯಿ ಪಲ್ಲವಿ ತಮ್ಮ ನಟನೆಯ ‘ಶ್ಯಾಮ್ ಸಿಂಘಾ ರಾಯ್‘ ಚಿತ್ರವನ್ನು ಬುರ್ಖಾ ಧರಿಸಿ ನೋಡಿ ಬಂದಿದ್ದಾರೆ.

ಚಿತ್ರಮಂದಿರದಲ್ಲಿ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ಅವರು ಬುರ್ಖಾ ಧರಿಸಿ ತೆರಳಿದ್ದಾರೆ.

ಹೈದರಾಬಾದ್‌ನ ಥಿಯೇಟರ್ ಒಂದಕ್ಕೆ ಬುರ್ಖಾ ಧರಿಸಿ ತೆರಳಿದ ಅವರು, ಸಾಮಾನ್ಯರಂತೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಮುಗಿದ ಬಳಿಕ ಹೊರಬಂದು ಕಾರು ಹತ್ತಿ ಮನೆಗೆ ಹೋಗಿದ್ದಾರೆ.

ADVERTISEMENT

ಸಾಯಿ ಪಲ್ಲವಿ, ಬುರ್ಖಾ ಧರಿಸಿ ಸಿನಿಮಾ ನೋಡಲು ಹೋಗಿರುವ ವಿಡಿಯೊ ವೈರಲ್ ಆಗಿದೆ.

ಅಲ್ಲದೆ, ಚಿತ್ರಮಂದಿರದಲ್ಲಿ ಅಷ್ಟೊಂದು ಜನರು ತುಂಬಿದ್ದರೂ, ಯಾರೊಬ್ಬರೂ ಸಾಯಿ ಪಲ್ಲವಿ ಗುರುತು ಹಿಡಿದಿಲ್ಲ.

ನಾಣಿ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದು, ಪಲ್ಲವಿ, ದೇವದಾಸಿ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.