ADVERTISEMENT

ಮಾಲ್ಡೀವ್ಸ್ ಕಡಲ ತೀರದಲ್ಲಿ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2021, 6:43 IST
Last Updated 10 ನವೆಂಬರ್ 2021, 6:43 IST
ಮಾನುಷಿ ಚಿಲ್ಲರ್ ಅವರ ಪ್ರವಾಸದ ಚಿತ್ರ
ಮಾನುಷಿ ಚಿಲ್ಲರ್ ಅವರ ಪ್ರವಾಸದ ಚಿತ್ರ   

ಬೆಂಗಳೂರು: 2017ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದ ಮಾನುಷಿ ಚಿಲ್ಲರ್, ಮಾಲ್ಡೀವ್ಸ್‌ ಕಡಲ ತೀರದ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಡೆಲಿಂಗ್ ವೃತ್ತಿಯಲ್ಲಿರುವ ಮಾನುಷಿ ಚಿಲ್ಲರ್, ಪ್ರವಾಸದ ಕ್ಷಣಗಳನ್ನು ಸೆರೆಹಿಡಿದಿದ್ದು, ಮಾಲ್ಡೀವ್ಸ್‌ನಲ್ಲಿ ಸುಂದರ ಸಂಜೆಯನ್ನು ಕಳೆಯುತ್ತಿದ್ದೇನೆ ಎಂದಿದ್ದಾರೆ.

ಇಂಟರ್‌ಕಾಂಟಿನೆಂಟಲ್ ಮಾಲ್ಡೀವ್ಸ್‌ ಮಾಮುನಗವ್ ರೆಸಾರ್ಟ್‌ನಲ್ಲಿ ಮಾನುಷಿ ತಂಗಿದ್ದಾರೆ.

ADVERTISEMENT

ಜತೆಗೆ, ಫ್ರಾನ್ಸ್‌ನ ಪ್ಯಾರಿಸ್‌ಗೂ ತೆರಳಿದ್ದು, ಪ್ರಸಿದ್ಧ ಐಫೆಲ್ ಟವರ್ ಬಳಿ ತೆಗೆಸಿಕೊಂಡ ಫೋಟೊಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳು ಲಾಕ್‌ಡೌನ್ ತೆರವಿನ ಬಳಿಕ ಮಾಲ್ಡೀವ್ಸ್ ಹಾಗೂ ವಿವಿಧ ತಾಣಗಳಿಗೆ ಪ್ರವಾಸ ತೆರಳುತ್ತಿದ್ದು, ತಮ್ಮ ಸಾಮಾಜಿಕ ತಾಣಗಳಲ್ಲಿ ಫೋಟೊ ಮತ್ತು ವಿಡಿಯೊ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.