ADVERTISEMENT

ಜಿಯೊ ಹಾಟ್‌ಸ್ಟಾರ್ ಒಟಿಟಿಯಲ್ಲಿ ಡೈನೊಸಾರ್‌ಗಳ ಲೋಕದ ಜುರಾಸಿಕ್ ವರ್ಲ್ಡ್ ರಿ ಬರ್ತ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 10:03 IST
Last Updated 15 ನವೆಂಬರ್ 2025, 10:03 IST
<div class="paragraphs"><p>ಜುರಾಸಿಕ್ ವರ್ಲ್ಡ್ ರಿ ಬರ್ತ್</p></div>

ಜುರಾಸಿಕ್ ವರ್ಲ್ಡ್ ರಿ ಬರ್ತ್

   

ಬೆಂಗಳೂರು: ಜುರಾಸಿಕ್ ಪಾರ್ಕ್‌ ಸಿರೀಸ್‌ನ ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಜುರಾಸಿಕ್ ವರ್ಲ್ಡ್– ರಿ ಬರ್ತ್’ ಹಾಲಿವುಡ್ ಸಿನಿಮಾ ಜಿಯೊ ಹಾಟ್‌ಸ್ಟಾರ್ ಒಟಿಟಿಯಲ್ಲಿ ನೋಡಲು ಲಭ್ಯವಾಗಿದೆ.

ಇಂಗ್ಲಿಷ್, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಈ ಸಿನಿಮಾವನ್ನು ನೋಡಬಹುದು.

ADVERTISEMENT

ಚಿತ್ರಮಂದಿರಗಳಲ್ಲಿ ಯಶಸ್ಸು ಕಂಡ ಈ ಸಿನಿಮಾ ಅಮೆಜಾನ್ ಫ್ರೈಂನಲ್ಲಿ ರೆಂಟ್ ಆಧಾರದಲ್ಲಿ ವೀಕ್ಷಕರಿಗೆ ಲಭ್ಯವಿತ್ತು. ಇದೀಗ ಜಿಯೊ ಹಾಟ್‌ಸ್ಟಾರ್‌ನಲ್ಲಿ ಬೇಸಿಕ್ ರಿಚಾರ್ಚ್ ಮಾಡಿಸಿದವರೂ ಸಹ ಈ ಬಿಗ್ ಬಜೆಟ್ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ಕಳೆದ ಜುಲೈನಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ ₹100 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ.

ಗಾಡ್ಜಿಲ್ಲಾ ಖ್ಯಾತಿಯ ನಿರ್ದೇಶಕ ಗೆರೆಥ್ ಎಡ್ವರ್ಡ್‌ ಅವರು ನಿರ್ದೇಶಿಸಿರುವ ಜುರಾಸಿಕ್ ವರ್ಲ್ಡ್ ರಿ ಬರ್ತ್ ಸಿನಿಮಾದಲ್ಲಿ ಹಾಲಿವುಡ್‌ನ ಸ್ಕಾರ್ಲೆಟ್ ಜಾನ್ಸನ್, ಮಹೇರ್ಶಾಲ್ ಅಲಿ ಸೇರಿದಂತೆ ಖ್ಯಾತನಾಮರು ನಟಿಸಿದ್ದಾರೆ.

ಡೈನೊಸಾರ್‌ಗಳು ವಾಸಿಸಲು ಯೋಗ್ಯವಾಗಿರುವ ಭೂಮಿಯ ಮೇಲಿನ ಕಾಲ್ಪನಿಕ ದ್ವೀಪವೊಂದಕ್ಕೆ ಭೇಟಿ ನೀಡುವ ವಿಜ್ಞಾನಿಗಳ ತಂಡ ಮನುಷ್ಯನ ಹೃದಯದ ಕಾಯಿಲೆಗಳಿಗೆ ಡೈನೊಸಾರ್‌ಗಳಿಂದ ರಕ್ತವನ್ನು ತರುವ ಪ್ರಯತ್ನವನ್ನು ಮಾಡುತ್ತದೆ. ಅಲ್ಲಿ ಅವರು ಅನುಭವಿಸುವ ಕಷ್ಟಗಳನ್ನು ಈ ಸಿನಿಮಾದಲ್ಲಿ ರೋಮಾಂಚನಕಾರಿಯಾಗಿ ಕಟ್ಟಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.