ADVERTISEMENT

ಮುಂಬೈ: ಸೂಟ್‌ಕೇಸ್‌ನಲ್ಲಿ ರೂಪದರ್ಶಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 19:01 IST
Last Updated 16 ಅಕ್ಟೋಬರ್ 2018, 19:01 IST
ಆರೋಪಿ ಮುಜಮ್ಮಿಲ್ ಸಯ್ಯದ್‌ನನ್ನು ಮಂಗಳವಾರ ಬೊರಿವಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು –ಪಿಟಿಐ ಚಿತ್ರ
ಆರೋಪಿ ಮುಜಮ್ಮಿಲ್ ಸಯ್ಯದ್‌ನನ್ನು ಮಂಗಳವಾರ ಬೊರಿವಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು –ಪಿಟಿಐ ಚಿತ್ರ   

ಮುಂಬೈ: ಮುಂಬೈನ ಪಶ್ಚಿಮ ಭಾಗದ ಮಲಾಡ್‌ನ ನಿರ್ಜನ ಪ್ರದೇಶದಲ್ಲಿ ಸೂಟ್‌ಕೇಸ್‌ವೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ.

ಯುವತಿಯನ್ನು 20ರ ಆಸುಪಾಸಿನಲ್ಲಿರುವರೂಪದರ್ಶಿ ಮಾನ್ಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ.

ಸೋಮವಾರ ಆಕೆ ಭೇಟಿ ಮಾಡಲು ತೆರಳಿದ್ದ20ವರ್ಷದ ವಿದ್ಯಾರ್ಥಿ ಮುಜಮ್ಮಿಲ್ ಸಯ್ಯದ್ ಎಂಬಾತನನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ.

ADVERTISEMENT

ಇಬ್ಬರ ನಡುವೆಯೂ ವಾಗ್ವಾದ ನಡೆದಿದ್ದು, ಬಳಿಕ ಆತ ಮಾನ್ಸಿಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಶವವನ್ನು ಸೂಟ್‌ಕೇಸ್‌ನಲ್ಲಿ ಇರಿಸಿದ ಸಯ್ಯದ್, ಕ್ಯಾಬ್‌ನಲ್ಲಿ ಮಲಾಡ್‌ಗೆ ತೆರಳಿ ಆ ಸೂಟ್‌ಕೇಸ್‌ ಬಿಸಾಡಿ ತೆರಳಿದ್ದಾನೆ. ಈ ಕುರಿತು ಅನುಮಾನಗೊಂಡ ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬಹಿರಂಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.