ADVERTISEMENT

𝐎𝐓𝐓: ಪುನರ್ಜನ್ಮದ ಕತೆಯಿರುವ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2026, 7:13 IST
Last Updated 2 ಫೆಬ್ರುವರಿ 2026, 7:13 IST
   

ಸ್ಯಾಂಡಲ್‌ವುಡ್‌ನ ಪ್ರಮುಖ ನಿರ್ದೇಶಕರಾದ ಸಿಂಪಲ್‌ ಸುನಿ ಅವರ ನಿರ್ದೇಶನದ ‘ಗತವೈಭವ’ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಜ.30ರಿಂದ ‘ಗತವೈಭವ’ ಸಿನಿಮಾವು ಅಮೆಜಾನ್‌ ಪ್ರೈಮ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಿದೆ.

‘ಗತವೈಭವ’ ಸಿನಿಮಾವು ರೋಮ್ಯಾಂಟಿಕ್ – ಫ್ಯಾಂಟಸಿ ಚಿತ್ರವಾಗಿದ್ದು, ದುಶ್ಯಂತ್ ಹಾಗೂ ಆಶಿಕಾ ರಂಗನಾಥ್ ಅವರು ಜೋಡಿಯಾಗಿ ನಟಿಸಿದ್ದಾರೆ. ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ ಮುಂತಾದವರು ತಾರಾಗಣದಲ್ಲಿದ್ದಾರೆ.

ADVERTISEMENT

‘ಗತವೈಭವ’ ಚಿತ್ರವು ನಾಲ್ಕು ವಿಭಿನ್ನ ಕಾಲಾವಧಿಗಳನ್ನು ಒಳಗೊಂಡಿದೆ. ಆಧುನಿಕ ಜಗತ್ತು, ದೇವಲೋಕ, ವಾಸ್ಕೋಡಗಾಮಾ ಕಾಲ ಮತ್ತು ಕರಾವಳಿ ಕರ್ನಾಟಕದ ಹಿನ್ನೆಲೆಯಲ್ಲಿ ಪುನರ್ಜನ್ಮದ ಪ್ರೇಮಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

2025 ನವೆಂಬರ್ 14 ರಂದು ಚಿತ್ರವು ಬಿಡುಗಡೆಯಾಗಿತ್ತು. ವೀಕ್ಷಕರಿಂದ ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಚಿತ್ರವು 140 ನಿಮಿಷಗಳ ಅವಧಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.