ಈ ವಾರ ರೋಮ್ಯಾಂಟಿಕ್, ಹಾಸ್ಯ, ಥ್ರಿಲ್ಲರ್‌ಗಳಿಂದ ಹಿಡಿದು ಪೌರಾಣಿಕ ಕಥೆಗಳಿರುವ ಸಿನಿಮಾಗಳು ಮತ್ತು ರಿಯಾಲಿಟಿ ಶೋಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ.
ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋಹಾಟ್‌ಸ್ಟಾರ್, ಜೀ5ಗಳಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ವಾರ ಒಟಿಟಿಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಪಟ್ಟಿ ಇಲ್ಲಿದೆ.
ಕಣ್ಣಪ್ಪ
ಪ್ರಭಾಸ್, ಅಕ್ಷಯ್ ಕುಮಾರ್, ನಟಿ ಕಾಜಲ್ ಅಗರ್ವಾಲ್, ವಿಷ್ಣು ಮಂಚು, ಪ್ರೀತಿ ಮುಕುಂದನ್ ಸೇರಿದಂತೆ ಸಾಕಷ್ಟ ನಟರು ಕಣ್ಣಪ್ಪ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ಪೌರಾಣಿಕ ಸಿನಿಮಾವಾಗಿದ್ದು, ಶಿವನ ಪಾತ್ರದಲ್ಲಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಮೋಹನ್ ಲಾಲ್, ಪ್ರಭಾಸ್, ಮೋಹನ್ ಬಾಬು, ಕಾಜಲ್ ಸೇರಿದಂತೆ ಇನ್ನು ಕೆಲ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಎಲ್ಲಿ ನೋಡಬಹುದು: ಪ್ರೈಮ್ ವಿಡಿಯೋ
ಭಾಷೆ: ತೆಲುಗು ಮತ್ತು ಇತರೆ
ಯಾವಾಗ: ಸೆಪ್ಟೆಂಬರ್ 05
ದಿ ಫಾಲ್ ಗೈ
ರಯಾನ್ ಗೊಸ್ಲಿಂಗ್ ಮತ್ತು ಎಮಿಲಿ ಬ್ಲಂಟ್ ಅವರ ಆಕ್ಷನ್-ಹಾಸ್ಯ 'ದಿ ಫಾಲ್ ಗೈ' ಸೆಪ್ಟೆಂಬರ್ 03ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಇಂಗ್ಲಿಷ್
ಯಾವಾಗ: ಸೆಪ್ಟೆಂಬರ್ 3
Wednesday: Season 2 Part 2
ಸೆಪ್ಟೆಂಬರ್ ಮೊದಲ ವಾರದಲ್ಲೇ ‘Wednesday: Season 2 Part 2’ ತೆರೆಗೆ ಅಪ್ಪಳಿಸುತ್ತಿದೆ. ಜೆನ್ನಾ ಒರ್ಟೆಗಾ ಮತ್ತು ಟಿಮ್ ಬರ್ಟನ್ ನಟಿಸಿರುವ ನಿಗೂಢ ಸಿನಿಮಾ ಇದಾಗಿದೆ. ಹೊಸ ರಹಸ್ಯಗಳೊಂದಿಗೆ ಹಾಗೂ ಒಟಿಟಿ ವೀಕ್ಷಕರಿಗೆ ರೋಮಾಂಚಕಾರಿ ಅನುಭವ ನೀಡಲು ಸಜ್ಜಾಗಿದೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಇಂಗ್ಲಿಷ್ ಮತ್ತು ಇತರೆ
ಯಾವಾಗ: ಸೆಪ್ಟೆಂಬರ್ 3
ಇನ್‌ಸ್ಪೆಕ್ಟರ್ ಝೆಂಡೆ
ಈ ಬಾರಿ ಒಟಿಟಿಗೆ ಇನ್‌ಸ್ಪೆಕ್ಟರ್ ಝೆಂಡೆ ಸಿನಿಮಾ ತೆರೆ ಕಾಣಲಿದೆ. ಇದು ನೈಜ ಘಟನೆಗಳಿಂದ ಪ್ರೇರಿತವಾದ ಕ್ರೈಂ-ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಮನೋಜ್ ಬಾಜ್‌ಪೇಯಿ ಇನ್‌ಸ್ಪೆಕ್ಟರ್ ಮಧುಕರ್ ಝೆಂಡೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಿಮ್ ಸರ್ಭ್ ‘ಈಜುಡುಗೆ ಕೊಲೆಗಾರ’ ಕಾರ್ಲ್ ಭೋಜರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು 1980ರ ದಶಕದ ಮುಂಬೈನಲ್ಲಿ ನಡೆದ ಪೊಲೀಸರು ಅಪರಾಧಿಯನ್ನು ಬೆನ್ನಟ್ಟುವ ಕಥಾಹಂದರವನ್ನು ಹೊಂದಿದೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಹಿಂದಿ
ಯಾವಾಗ: ಸೆಪ್ಟೆಂಬರ್ 05
ಆಂಖೋನ್ ಕಿ ಗಸ್ತಾಖಿಯನ್
ಬಾಲಿವುಡ್ ಜನಪ್ರಿಯ ನಟ ವಿಕ್ರಾಂತ್ ಮಾಸ್ಸಿ ಮತ್ತು ಶನಯಾ ಕಪೂರ್ ನಟಿಸಿರುವ ರೋಮ್ಯಾಂಟಿಕ್ ‘ಆಂಖೋನ್ ಕಿ ಗಸ್ತಾಖಿಯನ್’ ಸಿನಿಮಾವು ಒಟಿಟಿಗೆ ಲಗ್ಗೆ ಇಡುತ್ತಿದೆ. ದೃಷ್ಟಿಹೀನ ವ್ಯಕ್ತಿಯೊಬ್ಬ ತನ್ನ ಸ್ಥಿತಿಯ ಸತ್ಯವನ್ನು ಬಹಿರಂಗಪಡಿಸದೆ ಅಪರಿಚಿತಳನ್ನು ಪ್ರೀತಿಸುತ್ತಾನೆ. ರೈಲು ಪ್ರಯಾಣದಲ್ಲಿ ಈ ಪ್ರೀತಿ ಶುರುವಾಗಿ ಮುಂದೆ ಏನಾಗುತ್ತೆ ಅನ್ನೋದು ಈ ಕಥೆಯ ಸಾರಾಂಶ.
ಎಲ್ಲಿ ನೋಡಬಹುದು: ಜೀ5
ಭಾಷೆ: ಹಿಂದಿ
ಯಾವಾಗ: ಸೆಪ್ಟೆಂಬರ್ 05
'ರೈಸ್ & ಫಾಲ್'
ಬರೋಬ್ಬರಿ 16 ಸೆಲೆಬ್ರಿಟಿ ಸ್ಪರ್ಧಿಗಳು ಈ 'ರೈಸ್ & ಫಾಲ್' ರಿಯಾಲಿಟಿ ಶೋನಲ್ಲಿ ಮುಖಾಮುಖಿಯಾಗಲಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಅರ್ಜುನ್ ಬಿಜ್ಲಾನಿ, ಧನಶ್ರೀ ವರ್ಮಾ, ಕಿಕು ಶಾರದಾ ಮತ್ತು ಕುಬ್ರಾ ಸೇಠ್ ಸೇರಿದಂತೆ ಒಟ್ಟು 16 ಸೆಲೆಬ್ರಿಟಿಗಳು ಸ್ಪರ್ಧಿಸುತ್ತಿದ್ದಾರೆ. ಅಶ್ನೀರ್ ಗ್ರೋವರ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಆಡಳಿತಗಾರರು ಮತ್ತು ಕೆಲಸಗಾರರು ಎಂದು ವಿಂಗಡಿಸಲಾಗುತ್ತದೆ. ಅಲ್ಲಿ ಸವಾಲುಗಳು ಮತ್ತು ಮತದಾನದ ಮೂಲಕ ಶಕ್ತಿ ಪ್ರದರ್ಶಿಸಬೇಕಾಗುತ್ತದೆ.
ಎಲ್ಲಿ ನೋಡಬಹುದು: ಅಮೆಜಾನ್ MX ಪ್ಲೇಯರ್
ಭಾಷೆ: ಹಿಂದಿ
ದಿನಾಂಕ: ಸೆಪ್ಟೆಂಬರ್ 06
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.