ADVERTISEMENT

OTTಯಲ್ಲಿ ಯಾವ ಹೊಸ ಸಿನಿಮಾ ಬಿಡುಗಡೆ...? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜುಲೈ 2025, 10:44 IST
Last Updated 9 ಜುಲೈ 2025, 10:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಈ ವಾರ ಒಟಿಟಿಯಲ್ಲಿ ಅನೇಕ ಸಿನಿಮಾಗಳು ತೆರೆಕಾಣುತ್ತಿವೆ. ವಾರಾಂತ್ಯಕ್ಕೆ ನೀವೇನಾದರೂ ಯಾವ ಸಿನಿಮಾ ನೋಡಬಹುದು ಎಂದು ಯೋಚಿಸುತ್ತಿದ್ದರೆ ಅದರ ಪಟ್ಟಿ ಇಲ್ಲಿದೆ. 

ಕರ್ಕಿ

ADVERTISEMENT

2024ರಲ್ಲಿ ಚಂದನವನದಲ್ಲಿ ತೆರೆಕಂಡ ‘ಕರ್ಕಿ’ ಚಿತ್ರ ಜುಲೈ 11 ರಂದು ಸನ್‌ನೆಕ್ಸ್ಟ್‌ನಲ್ಲಿ ಬಿಡುಗಡೆಯಾಗುತ್ತಿದೆ. 

ಇದು 2018ರಲ್ಲಿ ತೆರೆಕಂಡ ತಮಿಳಿನ ಪೆರಿಯೆರುಮ್ ಪೆರುಮಾಲ್ (Pariyerum Perumal) ಚಿತ್ರದ ರೀಮೆಕ್‌ ಆಗಿದೆ. 

ಆಪ್‌ ಜೈಸಾ ಕೋಯಿ

ಆರ್. ಮಾಧವನ್‌, ಫಾತಿಮಾ ಸಾನಾ ಶೇಖ್‌ ನಟನೆಯ ‘ಆಪ್‌ ಜೈಸಾ ಕೋಯಿ’ ಚಿತ್ರ ಜುಲೈ 11ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣುತ್ತಿದೆ.

ನರಿವೆಟ್ಟಾ

2003 ರ ಮುತ್ತಂಗಾ ಬುಡಕಟ್ಟು ಪ್ರತಿಭಟನೆಯಿಂದ ಪ್ರೇರಿತವಾದ ‘ನರಿವೆಟ್ಟಾ’ ಚಿತ್ರ ಕೇರಳದ ಹೃದಯಭಾಗದಲ್ಲಿನ ಬುಡಕಟ್ಟು ಜನಾಂಗದವರ ಕಥಾಹಂದರವನ್ನು ಹೊಂದಿದೆ.

ಜುಲೈ 11 ರಿಂದು ಸೋನಿ ಲೈವ್‌ನಲ್ಲಿ ಮಲಯಾಳ ಸೇರಿ ಇತರ ಹಲವು ಭಾಷೆಗಳಲ್ಲಿ ಈ ಚಿತ್ರ ತೆರೆಕಾಣುತ್ತಿದೆ.

ಸ್ಪೆಷಲ್‌ ಆಪ್ (ಆಪರೇಷನ್‌) ಸೀಸನ್‌ 2

ಸೈಬರ್‌ ಭದ್ರತೆಯ ಕುರಿತಾದ ಸವಾಲುಗಳ ಕಥಾಹೊಂದಿರುವ ‘ಸ್ಪೆಷಲ್‌ ಆಪರೇಷನ್‌’ ವೆಬ್‌ ಸರಣಿಯ ಎರಡನೇ ಭಾಗ ಜುಲೈ 11 ರಂದು ತೆರೆ ಕಾಣುತ್ತಿದೆ.

ಹಿಂದಿ ಹಾಗೂ ಇತರ ಭಾಷೆಗಳಲ್ಲಿ ವೆಬ್‌ಸರಣಿ ಪ್ರಸಾರವಾಗಲಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಸರಣಿ ಬಿಡುಗಡೆಯಾಗುತ್ತಿದೆ.

ಕಲಿಯುಗಮ್

ಪ್ರಮೋದ್‌ ಸುಂದರ್ ಬರೆದು ನಿರ್ದೇಶಿಸಿರುವ ತಮಿಳಿನ ‘ಕಲಿಯುಗಮ್‌’ ಚಿತ್ರ ಜುಲೈ 11 ರಂದು ಸನ್‌ನೆಕ್ಸ್ಟ್‌ನಲ್ಲಿ ತೆರೆಕಾಣುತ್ತಿದೆ. ಇದು ಸೈಕಾಲೋಜಿಕಲ್‌ ಥ್ರಿಲರ್‌ ಸಿನಿಮಾವಾಗಿದೆ.

ಇವಲ್ಲದೆ ಅಮೆಜಾನ್‌ ಪ್ರೈಮ್‌ನಲ್ಲಿ ಕನ್ನಡದ ‘ಸಿದ್ಲಿಂಗು 2’, ‘ಯುದ್ಧಕಾಂಡ’ ಹಾಗೂ ಹಿಂದಿಯ ‘ಪುಣೆ ಹೈವೇ’ ಸಿನಿಮಾಗಳು ಈಗಾಗಲೇ ವೀಕ್ಷಣೆಗೆ ಲಭ್ಯವಿವೆ. 

ನೆಟ್‌ಫ್ಲಿಕ್‌ನಲ್ಲಿ ಕಮಲ್‌ ಹಾಸನ್‌ ನಟನೆಯ ‘ಥಗ್‌ಲೈಫ್’ ಸಿನಿಮಾ, ಜೀ5ನಲ್ಲಿ ಅಭಿಷೇಕ್‌ ಬಚ್ಚನ್‌ ನಟನೆಯ ‘ಕಾಲಿಧರ್ ಲಾಪತಾ’ ಕೂಡ ವೀಕ್ಷಣೆಗೆ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.