
ಬಾಲಿವುಡ್ ಪ್ರಸಿದ್ಧ ನಟಿ ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್ ಸಿನಿಮಾ ‘ದಿ ಬ್ಲಫ್’ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
‘ದಿ ಬ್ಲಫ್’ ಸಾಹಸಮಯ ಸಿನಿಮಾವಾಗಿದ್ದು, ಅಮೆಜಾನ್ ಪ್ರೈಮ್‌ನಲ್ಲಿ ಫೆ.25ರಿಂದ ಸ್ಟ್ರೀಮಿಂಗ್ ಆಗಲಿದೆ.
ಕೆರಿಬಿಯನ್ ದ್ವೀಪವೊಂದರಲ್ಲಿ ಕ್ರೂರ ಬುಕ್ಕನೇರ್‌ಗಳು ಆಕ್ರಮಿಸಿದಾಗ ಭೂತಕಾಲದ ಘಟನೆಗಳು ಮಹಿಳೆಯೊಬ್ಬಳಿಗೆ ನೆನಪಾಗುತ್ತದೆ. ನಂತರ ಏನಾಗುತ್ತದೆ ಎನ್ನುವುದೇ ಚಿತ್ರಕತೆ.
ನೇರ ಒಟಿಟಿಗೆ ಬಿಡುಗಡೆಯಾಗುತ್ತಿರುವ ‘ದಿ ಬ್ಲಫ್’ ಚಿತ್ರವು ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲಯಾಳ ಹಾಗೂ ಹಿಂದಿ ಭಾಷೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಪ್ರಿಯಾಂಕಾ ಚೋಪ್ರಾ, ಕಾರ್ಲ್ ಅರ್ಬನ್, ಇಸ್ಮಾಯಿಲ್ ಕ್ರೂಜ್ ಕಾರ್ಡೋವಾ, ಸಫಿಯಾ ಓಕ್ಲೆ, ಟೆಮುರಾ ಮಾರಿಸನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಫ್ರಾಂಕ್ ಇ. ಫ್ಲವರ್ಸ್ ಅವರು ನಿರ್ದೇಶಿಸಿದ್ದಾರೆ. ಚಿತ್ರವು 1 ಗಂಟೆ 41 ನಿಮಿಷಗಳ ಅವಧಿಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.