ADVERTISEMENT

ಅಬ್ಬಾ.. ಏನು ಸೆಕೆ ಎಂದು ಕೊಳದಲ್ಲಿ ಮುಳುಗಿ ಎದ್ದ ಸಲ್ಲೂ ಬಾಯ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 5:16 IST
Last Updated 28 ಮಾರ್ಚ್ 2022, 5:16 IST
ನಟ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್   

ಬೆಂಗಳೂರು: ಬೇಸಿಗೆಯ ಬಿಸಿ ಏರುತ್ತಿದೆ. ಸೆಕೆ ತಡೆಯಲಾರದೆ ಜನರು ಎಸಿ, ಫ್ಯಾನ್ ಮೊರೆ ಹೋಗುತ್ತಿದ್ದಾರೆ. ಅಲ್ಲದೆ, ತಂಪಾದ ಪ್ರದೇಶಗಳಲ್ಲಿ ಕಾಲ ಕಳೆಯಲು ಬಯಸುತ್ತಿದ್ದಾರೆ. ನಟ ಸಲ್ಮಾನ್ ಖಾನ್ ಕೂಡ ಇದಕ್ಕೆ ಹೊರತಾಗಿಲ್ಲ.

ಸಲ್ಮಾನ್ ಖಾನ್, ಮುಂಬೈ ಹೊರವಲಯದ ಪನ್ವೇಲ್‌ನ ಫಾರ್ಮ್‌ಹೌಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. 150 ಎಕರೆಯಷ್ಟು ವಿಸ್ತಾರವಾದ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್ ಅವರು ಬಿಡುವಿನ ವೇಳೆಯಲ್ಲಿ, ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ಶನಿವಾರ ಅವರು, ಫಾರ್ಮ್‌ಹೌಸ್‌ನಲ್ಲಿದ್ದ ಕೊಳದಲ್ಲಿ ತಣ್ಣನೆಯ ನೀರಿನಲ್ಲಿ ಕೆಲಸಮಯ ಕಳೆದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಪೋಸ್ಟ್ ಮಾಡಿದ್ದಾರೆ.

ADVERTISEMENT

ಸಲ್ಮಾನ್ ಫೋಟೊ ಕಂಡು ಅಭಿಮಾನಿಗಳು ಖುಷ್ ಆಗಿದ್ದು, 18 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.