ADVERTISEMENT

ಟಾಟಾ ಪ್ಲೇ ಬಿಂಜ್‌ನಲ್ಲಿ 16 ಒಟಿಟಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 11:15 IST
Last Updated 19 ಆಗಸ್ಟ್ 2022, 11:15 IST
ಚಿತ್ರ ಕೃಪೆ – ಟಾಟಾ ಪ್ಲೇ ಬಿಂಜ್‌ ಟ್ವಿಟರ್ ಖಾತೆ
ಚಿತ್ರ ಕೃಪೆ – ಟಾಟಾ ಪ್ಲೇ ಬಿಂಜ್‌ ಟ್ವಿಟರ್ ಖಾತೆ   

ಬೆಂಗಳೂರು: ಒಟಿಟಿ ವೇದಿಕೆಗಳ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು, ಇಷ್ಟದ ಇತರ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಯಸುವ ಎಲ್ಲರಿಗೂ ಈಗ ಟಾಟಾ ಪ್ಲೇ ಬಿಂಜ್‌ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

16 ಒಟಿಟಿ ವೇದಿಕೆಗಳ ಮೂಲಕ ಲಭ್ಯವಾಗುವ ಎಲ್ಲವನ್ನೂ ಒಂದೇ ಆ್ಯಪ್‌ ಮೂಲಕ ಪಡೆಯಬಹುದು. ಸ್ಮಾರ್ಟ್‌ಫೋನ್ ಬಳಕೆದಾರರು ಟಾಟಾ ಪ್ಲೇ ಬಿಂಜ್ ಆ್ಯಪ್‌ ಬಳಸಿ ಇಷ್ಟು ಒಟಿಟಿಗಳಲ್ಲಿನ ಕಾರ್ಯಕ್ರಮಗಳನ್ನು ಒಂದೇ ಕಡೆ ವೀಕ್ಷಿಸಬಹುದು. ಆರಂಭಿಕ ಚಂದಾ ಮೊತ್ತ ತಿಂಗಳಿಗೆ ₹ 59.

ಸ್ಮಾರ್ಟ್‌ಫೋನ್‌ ಮೂಲಕ, ವೆಬ್‌ಸೈಟ್‌ ಮೂಲಕ ಹಾಗೂ ಟಿ.ವಿ. ಮೂಲಕ ಟಾಟಾ ಪ್ಲೇ ಬಿಂಜ್‌ನಲ್ಲಿನ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶ ಇದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.