ಕೃಪೆ: ಎಕ್ಸ್‌ನಲ್ಲಿ ನೆಟ್ಟಿಗರು ಹಂಚಿಕೊಂಡ ಚಿತ್ರ
ಬೆಂಗಳೂರು: ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ: ಒಂದು ದಂತಕಥೆ, ಚಾಪ್ಟರ್–1' ಸಿನಿಮಾ ಇಂದು (ಗುರುವಾರ) ತೆರೆ ಕಂಡಿದೆ.
ಚಿತ್ರದ ಮೊದಲ ಪ್ರದರ್ಶನ ಕಾಣುತ್ತಿದ್ದಂತೆಯೇ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ರಿಷಬ್ ನಟನೆಗೆ ಭಾರಿ ಮನ್ನಣೆ ವ್ಯಕ್ತವಾಗುತ್ತಿದ್ದು, ಮಗದೊಂದು 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ' ಲೋಡಿಂಗ್ ಅಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
'ಕಾಂತಾರ' ಪೂರ್ವದ ಕಥೆ ಹೇಳುವ ಚಿತ್ರದ ಮೇಕಿಂಗ್ ಬಗ್ಗೆಯೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಥೆ ಹೇಳುವ ಹಾಗೂ ಅದನ್ನು ತೆರೆ ಮೇಲೆ ಬಿಂಬಿಸುವ ಅದ್ಭುತ ಕಲೆಯನ್ನು ರಿಷಬ್ ಹೊಂದಿದ್ದು, ಕ್ಲೈಮಾಕ್ಸ್ ಅಂತೂ ರೋಮಾಂಚನ ಮೂಡಿಸಿದೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
'ನಿಜಕ್ಕೂ ಇದೊಂದು ಮರೆಯಲಾಗದ ಅನುಭವ. ಎಂತಹ ಕೈಮ್ಯಾಕ್ಸ್, ಬಿಗ್ ಸ್ಕ್ರೀನ್‌ನಲ್ಲಿ ಮಿಸ್ ಮಾಡದೇ ನೋಡಲೇಬೇಕಾದ ಮೂವೀ' ಎಂದು ಸಿನಿಮಾ ಪ್ರಿಯರಾದ ನಿತಿನ್ ತಿಳಿಸಿದ್ದಾರೆ.
'ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ಕ್ಲೈಮ್ಯಾಕ್ಸ್' ಎಂದು 'ಲೆಕ್ಸ್ ಎಕ್ಸ್ ಒಟಿಟಿ ಗ್ಲೋಬಲ್' ಅಭಿಪ್ರಾಯಪಟ್ಟಿದೆ.
ಕಾಂತಾರ ಮೊದಲ ಭಾಗದ ಕೊರತೆಯನ್ನು ಎರಡನೇ ಭಾಗದಲ್ಲಿ ನೀಗಿಸಲಾಗಿದೆ. ಮೊದಲನೇಯದಕ್ಕಿಂತಲೂ ಎರಡನೇ ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದೇನೆ. ಇಂಟರ್ವಲ್ ಆದ ಬಳಿಕದ ದೃಶ್ಯಗಳು ಅದ್ಭುತವಾಗಿದೆ ಎಂದು 'ಟ್ರುತ್ ಸ್ಪೀಕರ್' ಎಂಬ 'ಎಕ್ಸ್' ಪುಟದಲ್ಲಿ ಬರೆಯಲಾಗಿದೆ.
'ಅಮುತಾ ಭಾರತಿ' ಎಂಬವರು ಚಿತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ, ವಿಎಫ್‌ಎಕ್ಸ್ ಮತ್ತು ಕೊನೆಯ 30 ನಿಮಿಷಗಳ ಕ್ಲೈಮ್ಯಾಕ್ಸ್ ಅದ್ಭುತ ಎಂದು ಹೇಳಿದ್ದಾರೆ.
ಈ ನಡುವೆ ರಾಜ್ ತಿವಾರಿ ಎಂಬವರು, ಕಾಂತಾರ ಅಧ್ಯಾಯ 1 ಚಿತ್ರವನ್ನು ಆನಂದಿಸಲು ಸಾಧ್ಯವಾಗಿಲ್ಲ ಎಂದು ಕೊರಗಿದ್ದಾರೆ. ನನ್ನ ಕಿವಿ ಹಾಗೂ ತಲೆಗೆ ನೋವನ್ನುಂಟು ಮಾಡುತ್ತಿತ್ತು. ಚಿತ್ರದಲ್ಲಿ ಅನಗತ್ಯ ವಿಷಯಗಳು ಬಹಳಷ್ಟು ಇದ್ದು, ಹಾಸ್ಯ ಸನ್ನಿವೇಷ ಸರಿಯಾಗಿ ಮೂಡಿಬಂದಿಲ್ಲ. ಕಾಂತಾರ ಮೊದಲನೆಯ ಚಿತ್ರಕ್ಕೆ ಸಮಾನವಾದ ಕ್ಲೈಮ್ಯಾಕ್ಸ್ ಆಗಿದೆ ಎಂದು ಹೇಳಿದ್ದಾರೆ.
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿದ್ದು, ಮಲಯಾಳ ನಟ ಜಯರಾಮ್, ಕನ್ನಡಿಗರೇ ಆದ ಬಾಲಿವುಡ್ ನಟ ಗುಲ್ಶನ್ ದೇವಯ್ಯ ತಾರಾಬಳಗದಲ್ಲಿದ್ದಾರೆ.
'ಕಾಂತಾರ: ಒಂದು ದಂತಕಥೆ, ಚಾಪ್ಟರ್–1' ಕುರಿತು ನೆಟ್ಟಿಗರ ಇನ್ನಷ್ಟು ಅಭಿಪ್ರಾಯಗಳು ಇಲ್ಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.