ADVERTISEMENT

ನವರಾತ್ರಿಯಲ್ಲಿ ವಚನ ರಾತ್ರಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಆಧುನಿಕತೆ ಬೆಳೆದಂತೆ ಜನರಲ್ಲಿ ಸಂಪ್ರದಾಯ, ಹಬ್ಬಗಳ ಆಚರಣೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ನಾಡಹಬ್ಬ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಗಳನ್ನು ಕೂರಿಸಿ ದಸರಾ ಆಚರಿಸುವುದು ಹಳೆ ಮೈಸೂರು ಭಾಗದಲ್ಲಿ ಪ್ರಚಲಿತದಲ್ಲಿದೆ.

ಈ ಸಾಂಸ್ಕೃತಿಕ ಆಚರಣೆಗೆ ಮತ್ತಷ್ಟು ರಂಗು ತುಂಬಲು `ವಚನ ಜ್ಯೋತಿ ಬಳಗ~ ನಾಗರಬಾವಿ ಬಡಾವಣೆಯಲ್ಲಿ `ವಚನ ರಾತ್ರಿ~ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಕಾರ್ಯಕ್ರಮ ನಡೆದ ಮನೆಯ ಒಡತಿ ಎಪ್ಪತ್ತು ವಯಸ್ಸಿನ ರಾಜಮ್ಮ ಅವರು ಪ್ರತಿವರ್ಷದಂತೆ ಈ ಬಾರಿಯೂ ಗೊಂಬೆ ಕೂರಿಸುವ ಆಚರಣೆ ಮುಂದುವರೆಸಿಕೊಂಡು ಬಂದಿದ್ದಾರೆ. ಈ ಬಾರಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮತ್ತಿತರ ವಚನಕಾರರ ಗೊಂಬೆಗಳನ್ನು ಕೂರಿಸಿದ್ದು ವಿಶೇಷವಾಗಿತ್ತು.

ರಂಗಭೂಮಿ ಕಲಾವಿದ ಅರಬಗಟ್ಟ ಬಸವರಾಜು ಅವರು ರಂಗಗೀತೆಗಳನ್ನು ಹಾಡಿದರು.

ವೀಣಾ ಮೂರ್ತಿ ಅವರ `ದೇವಿಸ್ತುತಿ~, ಪ್ರೇಮಾ ಶಾಂತವೀರಯ್ಯ ಅವರ ಜನಪದ ಶಿವಸ್ತುತಿ, ಚಂದ್ರಮತಿ ಮಜಗೆ ಅವರ ವಚನ, ರತ್ನಾ ವೆಂಕಟೇಶ್ ಹಾಗೂ ಮೀನಾಕ್ಷಿ ಮೇಟಿ ಅವರ ಸಾಮೂಹಿಕ ಗೀತ ಗಾಯನ ಹಬ್ಬದ ವಾತಾವರಣಕ್ಕೆ ಗಾನ ಸಿಂಚನ ಮಾಡಿದಂತಿತ್ತು.

ಬಳಗದ ಅಧ್ಯಕ್ಷ ಎಸ್.ಪಿನಕಪಾಣಿ, ಶಿವಕುಮಾರ್, ರುದ್ರೇಶ್ ಅಂದರಗಿ, ಟಿ.ಆರ್. ಮಹದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.