ಜತೆಗಿರುವನು ಚಂದಿರ’ ನಾಟಕ ಪ್ರದರ್ಶನದ ದೃಶ್ಯ
ಸಂಕಲ್ಪ, ಮೈಸೂರು ಅರ್ಪಿಸುವ ’ಜತೆಗಿರುವನು ಚಂದಿರ’ ನಾಟಕವು ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.
ಶೋಲೋಮ್ ಅಲೈಖೇಂ– ಜೋಸೆಫ್ ಟಿನ್ ರಚಿತ ‘ಫಿಡ್ಲರ್ ಆನ್ ದಿ ರೂಫ್‘ ಚಿತ್ರಪಟ ಕಥೆ ಮೂಲವನ್ನು ಜಯಂತ ಕಾಯ್ಕಿಣಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಹುಲುಗಪ್ಪ ಕಟ್ಟೀಮನಿಯವರ ವಿನ್ಯಾಸ ಮತ್ತು ನಿರ್ದೇಶನ ಹಾಗೂ ಶ್ರೀನಿವಾಸ ಭಟ್ ಚೀನಿಯವರ ಸಂಗೀತದಲ್ಲಿ ನಾಟಕ ಮೂಡಿಬರಲಿದೆ. ರಾಹುಲ್, ದಿವ್ಯಶ್ರೀ, ಭಾಷ್ ರಾಘವೇಂದ್ರ ರಂಗವನ್ನು ನಿರ್ವಹಿಸಲಿದ್ದಾರೆ ಹಾಗೂ ಶಶಿಧರ ಭಾರಿಘಾಟ್, ಗೋಪಿನಾಥ್ ಸಂಚಾಲಕತ್ವದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್‌ಗಳು ಲಭ್ಯ ಇವೆ.
ಸ್ಥಳ: ರಂಗಶಂಕರ, ಬೆಂಗಳೂರು
ದಿನಾಂಕ: 23.07.2024
ಸಮಯ: ಸಂಜೆ 7.30
ಗುರುತು ಕೆಲವರಿಗೆ ಹೆಮ್ಮೆಯಾದರೆ ಕೆಲವರಿಗದು ಅಸಹ್ಯ, ಹಿಂಸೆ. ಜೀವನದ ಉದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ‘ಉಳಿವಿಗಾಗಿ‘ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ ‘ಬದುಕು’ ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುದು.
ಸಾಗದ ದಾರಿಯನ್ನು ಕಂಡು ದಣಿವಾಗುತ್ತದೆ. ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು ಸಂಭ್ರಮ; ಬೆಳಕೊಂದು ಸಂಭ್ರಮ ಹೀಗೆ ಗುರುತಿನ ಸುತ್ತ ಇರುವ ಹಲವು ಸಂಕೀರ್ಣ ವಿರೋಧಭಾಸಗಳನ್ನು ಎದುರುಗೊಳ್ಳುವ ಕಥನಗಳ ಗೊಂಚಲು ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’
ಇಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘ವೇಟಿಂಗ್ ಫಾರ್ ವೀಸಾ’ ಒಂದು ರೂಪಕವಾಗಿ ಕಂಡು ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ ? ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.
ಪಠ್ಯ ಆಕರ: ಎನ್.ಕೆ.ಹನುಮಂತಯ್ಯ, ಚಂದ್ರಶೇಖರ್ ಕೆ.
ರಚನೆ, ವಿನ್ಯಾಸ ನಿರ್ದೇಶನ: ಲಕ್ಷ್ಮಣ್‌್ ಕೆ.ಪಿ
ನಾಟಕ: ವಿ.ಎಲ್. ನರಸಿಂಹಮೂರ್ತಿ
ದಿನಾಂಕ: ಜುಲೈ 20, ಶನಿವಾರ
ಸ್ಥಳ: ರಂಗಶಂಕರ ಸಮಯ: ಸಂಜೆ 3.30– 7.30 (ಬುಕ್ ಮೈ ಶೋನಲ್ಲಿ ಟಿಕೆಟ್‌ಗಳು ಲಭ್ಯ ಇವೆ)
ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಅರ್ಪಿಸುವ ‘ತಿಂಗಳ ನಾಟಕ ಸಂಭ್ರಮ’ ಕಾರ್ಯಕ್ರಮವು ಜುಲೈ 25ರಂದು ಬೆಂಗಳೂರಿನ ಸಮುಚ್ಚಯ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕವಿ ಪ್ರೊ.ಎಸ್.ಜಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಸಲಹೆಗಾರ ಕೆ.ವಿ.ಪ್ರಭಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಿಣಿದೇವಿ ಮಾಲಗತ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜ ಮೂರ್ತಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’ ಕೃತಿಯನ್ನು ನಾಟಕ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಕರಣಂ ಪವನ್ ಪ್ರಸಾದ್ ರಂಗ ರೂಪಕ್ಕೆ ತಂದಿದ್ದಾರೆ.
ಹನುರಾಮಸಂಜೀವ ಅವರ ರಂಗ ವಿನ್ಯಾಸ ಹಾಗೂ ನಿರ್ದೇಶನ ಮತ್ತು ಪ್ರವರ ಥಿಯೇಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.