ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ನೀಡುವ 2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ ನಾಟಕಕಾರ ರಾಮಕೃಷ್ಣ ಮರಾಠೆ ಅವರ ‘ರಂಗಭೂಮಿಯ ಸ್ವಾತಂತ್ರ್ಯ ಸಂಗ್ರಾಮ’ ಕೃತಿ ಆಯ್ಕೆಯಾಗಿದೆ.
ಈ ಬಹುಮಾನವು ₹25 ಸಾವಿರ ನಗದು ಒಳಗೊಂಡಿದೆ. ರಂಗಪಠ್ಯಗಳ ಹೊರತಾಗಿ ಕನ್ನಡ ರಂಗಭೂಮಿಯ ಬಗ್ಗೆ ಬರಹಗಳನ್ನು ಮತ್ತು ಪುಸ್ತಕಗಳನ್ನು ಉತ್ತೇಜಿಸುವ ಸಲುವಾಗಿ ರಂಗಭೂಮಿ ಕುರಿತಾದ ಪುಸ್ತಕವೊಂದಕ್ಕೆ ಬಹುಮಾನ ನೀಡಲಾಗುತ್ತಿದೆ.
ಈ ಪ್ರಶಸ್ತಿ ಆಯ್ಕೆ ಸಮಿತಿಯು ಎಂ.ಎಸ್.ಆಶಾದೇವಿ, ಬಿ.ಆರ್.ವೆಂಕಟರಮಣ ಐತಾಳ್ ಮತ್ತು ಜಯದೇವಿ ಗಾಯಕವಾಡ ಅವರನ್ನು ಒಳಗೊಂಡಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.