ADVERTISEMENT

ಸಕಲೇಶಪುರದಲ್ಲಿ ಬೀಡುಬಿಟ್ಟ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 6:15 IST
Last Updated 9 ಫೆಬ್ರುವರಿ 2026, 6:15 IST
<div class="paragraphs"><p> ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು</p></div>

‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು

   

ಚಿತ್ರ: ಇನ್‌ಸ್ಟಾಗ್ರಾಂ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು ಸದ್ಯ ಸಕಲೇಶಪುರದಲ್ಲಿ ಬೀಡುಬಿಟ್ಟಿದ್ದಾರೆ. ಇದೇ ಫೋಟೊಗಳನ್ನು ನಟ ಹರೀಶ್ ರಾಜ್‌ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಭಾಗ್ಯಲಕ್ಷ್ಮೀ ತಂಡದ ಜೊತೆ ಸಕಲೇಶಪುರದಲ್ಲಿ’ ಎಂದು ಅಡಿಬರಹ ಹಾಕಿದ್ದಾರೆ.

ADVERTISEMENT

‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸುಷ್ಮಾ ಕೆ. ರಾವ್, ಹರೀಶ್ ರಾಜ್, ಸುದರ್ಶನ್ ರಂಗಪ್ರಸಾದ್‌ ಮುಂತಾದವರು ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಭಾಗ್ಯ ಗೊಂದಲದಲ್ಲಿದ್ದಾಳೆ.

ಒಂದು ಕಡೆ ತಾಂಡವ್‌ ಮತ್ತೊಂದು ಕಡೆ ಆದಿ. ಈ ಇಬ್ಬರಲ್ಲಿ ಯಾರನ್ನು ಒಪ್ಪಿಕೊಳ್ಳಬೇಕೆಂದು ಒದ್ದಾಡುತ್ತಿದ್ದಾಳೆ. ಹೀಗಿರುವಾಗಲೇ, ಇಡೀ ಧಾರಾವಾಹಿ ತಂಡ ಸಕಲೇಶಪುರಕ್ಕೆ ಹೋಗಿದೆ. ಆದರೆ ಮುಂದಿನ ಸಂಚಿಕೆಯಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿಯ ತಿರುವು ಪಡೆದುಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.

ನಟ ಹರೀಶ್ ರಾಜ್, ರಾಜೇಶ್ ಧ್ರುವ, ತನ್ವಿ ಪಾತ್ರಧಾರಿ ಅಮೃತಾ, ತನ್ಮಯ್ ಪಾತ್ರಧಾರಿ ನಿಹಾರ್‌ ಗೌಡ ಮುಂತಾದ ಕಲಾವಿದರು ಸಕಲೇಶಪುರದ ನಿಸರ್ಗ ಸಿರಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.