ಬೆಂಗಳೂರು: ರಿಯಾಲಿಟಿ ಶೋಗಳು, ಗೇಮ್ ಶೋಗಳಿಂದ ವೀಕ್ಷಕರ ಮನ ಗೆದ್ದಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲು ಭರ್ಜರಿ ಬ್ಯಾಚುಲರ್ಸ್ ಆವೃತ್ತಿ 2 ಪ್ರಾರಂಭವಾಗುತ್ತಿದೆ.
ಭರ್ಜರಿ ಬ್ಯಾಚುಲರ್ಸ್ ಆವೃತ್ತಿ 1ರ ಯಶಸ್ಸಿನ ಬಳಿಕ ಮತ್ತಷ್ಟು ವಿಭಿನ್ನವಾಗಿ ಮತ್ತು ಮನರಂಜನೀಯವಾಗಿ ಜನರನ್ನು ರಂಜಿಸಲು ಫೆಬ್ರುವರಿ 22ರಿಂದ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಭರ್ಜರಿ ಬ್ಯಾಚುಲರ್ಸ್–2 ಪ್ರಸಾರವಾಗಲಿದೆ.
ಬ್ಯಾಚುಲರ್ಸ್‌ಗೆ ಪ್ರೀತಿ ಪಾಠ ಮಾಡಲು ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಜೊತೆಗೆ ನಟಿ ರಚಿತಾರಾಮ್ ತೀರ್ಪುಗಾರರಾಗಿದ್ದಾರೆ. ನಿರಂಜನ್ ದೇಶಪಾಂಡೆ ಅವರು ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಈ ಬಾರಿ ಆವೃತ್ತಿಯಲ್ಲಿ ಗಿಲ್ಲಿನಟ, ಡ್ರೋನ್ ಪ್ರತಾಪ್, ಹುಲಿ ಕಾರ್ತಿಕ್, ಪ್ರವೀಣ್ ಜೈನ್, ಭುವನೇಶ್, ಸುನಿಲ್, ದರ್ಶನ್ ನಾರಾಯಣ್, ಪ್ರೇಮ್ ತಾಪ, ಸೂರ್ಯ, ಉಲ್ಲಾಸ್, ರಕ್ಷಕ್ ಬುಲೆಟ್ ಅವರು ಬ್ಯಾಚುಲರ್ಸ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಮನಸು ಕದಿಯುವ ಏಂಜಲ್‌ಗಳು ಯಾರಾಗಲಿದ್ದಾರೆ ಅನ್ನೋದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.