ADVERTISEMENT

ಮನೆಮಗಳ ರೀತಿ ನೋಡಿದ್ದೀರಿ, ಇದಕ್ಕಿಂತ ಇನ್ನೇನು ಬೇಕು: ರಕ್ಷಿತಾ ಶೆಟ್ಟಿ ಮನದ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2026, 6:38 IST
Last Updated 23 ಜನವರಿ 2026, 6:38 IST
<div class="paragraphs"><p>ರಕ್ಷಿತಾ ಶೆಟ್ಟಿ </p></div>

ರಕ್ಷಿತಾ ಶೆಟ್ಟಿ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ ಸೀಸನ್ 12ರಲ್ಲಿ ರನ್ನರ್‌ ಅಪ್ ಆದ ರಕ್ಷಿತಾ ಶೆಟ್ಟಿ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. ‘ನನ್ನನ್ನು ಮನೆ ಮಗಳ ರೀತಿಯಲ್ಲಿ ನೋಡಿದ್ದೀರಿ, ಇದಕ್ಕಿಂತ ಇನ್ನೇನು ಬೇಕು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಬಿಗ್‌ಬಾಸ್‌ ರನ್ನರ್‌ ಅಪ್‌ ಆಗಿ ನಾಲ್ಕು ದಿನದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

ರಕ್ಷಿತಾ ಹೇಳಿದ್ದೇನು?

‘ನನಗೆ ಮಾತನಾಡಲು ಸ್ವರ ಇಲ್ಲ. ಏಕೆಂದರೆ ನಿರಂತರವಾಗಿ 2-3 ದಿನಗಳಿಂದ ನಾನು ಸಂದರ್ಶನದಲ್ಲಿ ಭಾಗಿಯಾಗಿದ್ದೆ. ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮಗೆ ಹೇಗೆ ಧನ್ಯವಾದ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಬಿಗ್‌ಬಾಸ್‌ ಮನೆಯಲ್ಲಿ ಇದ್ದಾಗ ನೀವೆಲ್ಲ ನನ್ನ ಮೇಲೆ ಇಷ್ಟು ಪ್ರೀತಿ, ಬೆಂಬಲ ನೀಡಿದ್ದೀರಿ ಎಂದು ಗೊತ್ತಿರಲಿಲ್ಲ. ಬಿಗ್‌ಬಾಸ್‌ನಿಂದ ಹೊರಬಂದ ಮೇಲೆ ನಿಮ್ಮ ಪ್ರೀತಿ ನೋಡಿ ನನಗೆ ನಂಬಲು ಆಗುತ್ತಿಲ್ಲ. ಇದನ್ನೆಲ್ಲ ನೋಡಿದರೆ ಕನಸಾ? ಅಥವಾ ಸತ್ಯಾನಾ? ಅಂತ ಅನಿಸುತ್ತೆ. ಅಷ್ಟು ಪ್ರೀತಿ ನೀವೆಲ್ಲ ಕೊಟ್ಟಿದ್ದೀರಿ. ಈ ಮೊದಲು ನನ್ನ ಬಗ್ಗೆ ತುಂಬಾ ನೆಗೆಟಿವ್ ಕಮೆಂಟ್‌ ಬರುತ್ತಿತ್ತು. ತುಂಬಾ ಟ್ರೋಲ್ ಮಾಡುತ್ತಿದ್ದರು. ಆದರೆ ಈಗ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಕಮೆಂಟ್‌ ನೋಡಲೇ ಇಲ್ಲ. ಟ್ರೋಲ್, ಮೀಮ್ಸ್ ಮಾಡಿದವರಿಗೆ, ಎಲ್ಲ ಯುಟ್ಯೂಬರ್ಸ್‌, ಇನ್‌ಫ್ಲುಯೆನ್ಸರ್ಸ್‌ ಎಲ್ಲರೂ ತುಂಬಾ ಬೆಂಬಲ ಕೊಟ್ಟಿದ್ದೀರಿ. ನಿಮ್ಮ ಆಶೀರ್ವಾದ, ಪ್ರೀತಿಯಿಂದ ನಾನು ರನ್ನರ್ ಅಪ್ ಆಗಿದ್ದೇನೆ. ನನಗೋಸ್ಕರ ಸಮಯ ಕೊಟ್ಟು ಇಷ್ಟೊಂದು ವೋಟ್ ಹಾಕಿದ್ದಕ್ಕೆ ತುಂಬು ಹೃದಯದ ಧನ್ಯವಾದ. ಎಲ್ಲ ಕನ್ನಡಿಗರಿಗೂ, ಬೇರೆ ರಾಜ್ಯದಲ್ಲಿರುವ, ಮುಂಬೈನಲ್ಲಿರುವ, ಬೇರೆ ದೇಶದಲ್ಲಿರುವ ಎಲ್ಲ ಕನ್ನಡಿಗರಿಗೂ ಧನ್ಯವಾದ ತಿಳಿಸುತ್ತೇನೆ. ನನ್ನನ್ನು ಮನೆ ಮಗಳ ರೀತಿಯಲ್ಲಿ ನೋಡಿದ್ದೀರಿ, ಇದಕ್ಕಿಂತ ಇನ್ನೇನು ಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.