ಗೌತಮಿ
ಬೆಂಗಳೂರು: ಬಿಗ್ ಬಾಸ್ 11ನೇ ಆವೃತ್ತಿಯ ಕೊನೆಯ ಕಿಚ್ಚನ ಪಂಚಾಯ್ತಿಯನ್ನು ಸುದೀಪ್ ಶನಿವಾರ ನಡೆಸಿಕೊಟ್ಟಿದ್ದು, ಫಿನಾಲೆ ವಾರಕ್ಕೂ ಮುನ್ನವೇ ಗೌತಮಿ ಜಾಧವ್ ಎಲಿಮಿನೇಟ್ ಆಗಿದ್ದಾರೆ.
ವಾರದ ಮಧ್ಯೆ ಎಲಿಮಿನೇಷನ್ ಮಾಡಲಾಗುತ್ತದೆ ಎಂದು ಘೋಷಿಸಿದ್ದರೂ ಟಾಸ್ಕ್ ವಿಚಾರಗಳಲ್ಲಾದ ಗೊಂದಲಗಳಿಂದ ಟಾಸ್ಕ್ ಮತ್ತು ಮಿಡ್ ವೀಕ್ ಎಲಿಮಿನೇಷನ್ ರದ್ದು ಮಾಡಲಾಗಿತ್ತು.
ವಾರಾಂತ್ಯ ಗೌತಮಿ ಮನೆಯಿಂದ ಹೊರಹೋಗಿದ್ದು, ಭಾನುವಾರದ ಸಂಚಿಕೆಯಲ್ಲಿ ಧನರಾಜ್ ಆಚಾರ್ ಹೊರಹೋಗಿದ್ದಾರೆ ಎನ್ನಲಾಗಿದೆ.
ನಾಮಿನೇಷನ್‌ನಲ್ಲಿ ಭವ್ಯಾ, ಮಂಜು, ಧನರಾಜ್, ರಜತ್ ಇದ್ದಾರೆ. ಫಿನಾಲೆಗೆ ಹನುಮಂತು, ತ್ರಿವಿಕ್ರಮ್ ಮತ್ತು ಮೋಕ್ಷಿತಾ ಆಯ್ಕೆಯಾಗಿದ್ದಾರೆ.
ಶನಿವಾರ ಬಿಗ್ ಬಾಸ್ ಫಿನಾಲೆಯ ಟ್ರೋಫಿಯನ್ನು ಅನಾವರಣ ಮಾಡಲಾಗಿದೆ.
ಭಾನುವಾರದ ಸಂಚಿಕೆಯ ಪ್ರೊಮೊದಲ್ಲಿ ಭವ್ಯಾ ಮತ್ತು ತ್ರಿವಿಕ್ರಮ್ ಅವರ ಪ್ರೀತಿಯ ವಿಚಾರ ಪ್ರಸ್ತಾಪವಾಗಿದೆ. ಕಳೆದ ವಾರ ಮನೆಗೆ ಬಂದಿದ್ದ ಹಳೆಯ ಸ್ಪರ್ಧಿಗಳು ಎಲ್ಲರನ್ನೂ ರಂಜಿಸಿದ್ದರು. ಈ ನಡುವೆ ಗೋಲ್ಡ್ ಸುರೇಶ್ ಅವರು ಭವ್ಯಾ ಅವರ ಬಳಿ, ‘ತ್ರಿವಿಕ್ರಮ್ ಅವರ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿರಾ’ ಎಂದು ಕೇಳಿದ್ದಾರೆ. ಇದೇ ವಿಚಾರವಾಗಿ ಸುದೀಪ್ ಮಾತನಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.