
ಅಶ್ವಿನಿ ಗೌಡ, ಗಿಲ್ಲಿ ನಟ
ಚಿತ್ರ: ಜಿಯೋ ಹಾಟ್ ಸ್ಟಾರ್
ಕನ್ನಡದ ಬಿಗ್‌ಬಾಸ್ ಸೀಸನ್ 12 ಮುಕ್ತಾಯ ಹಂತದಲ್ಲಿದೆ. ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಈ ಸೀಸನ್ ವಿನ್ನರ್ ಯಾರಾಗಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ. ಇದರೆ ನಡುವೆ ಅಶ್ವಿನಿ ಗೌಡ ಅವರು ಗಿಲ್ಲಿ ನಟನ ತಾಯಿಗೆ ವಿಶೇಷವಾದ ಉಡುಗೊರೆ ಒಂದನ್ನು ನೀಡಿದ್ದಾರೆ.
ಕಳೆದ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಅವಕಾಶವೊಂದನ್ನು ನೀಡಿದ್ದರು. ಯಾರಿಗಾದರೂ ನೀವು ವಿಶೇಷ ಎನಿಸಿದ ಉಡುಗೊರೆಯನ್ನು ಕೊಡುವುದಿದ್ದರೆ ಕೊಡಬಹುದು ಹೇಳಿದ್ದರು. ಆ ಕೂಡಲೇ ಸ್ಪರ್ಧಿಗಳೆಲ್ಲಾ ಅವರವರ ನೆಚ್ಚಿನ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲಿ ಅಶ್ವಿನಿ ಗೌಡ ಅವರು ಗಿಲ್ಲಿ ತಾಯಿಗೆ ಉಡುಗೊರೆ ಒಂದನ್ನು ಕೊಟ್ಟಿದ್ದಾರೆ.
ಗಿಲ್ಲಿ ತಾಯಿಗೆ ಉಡುಗೊರೆ ಕೊಡುತ್ತಿರುವ ಅಶ್ವಿನಿ ಗೌಡ
ಬಿಗ್‌ಬಾಸ್ ಶುರುವಿನಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟನ ನಡುವೆ ಗಲಾಟೆ ಆಗುತ್ತಲೇ ಇತ್ತು. ಆದರೆ ಬಿಗ್‌ಬಾಸ್ ಮುಗಿಯುವ ಹೊತ್ತಿಗೆ ಅಶ್ವಿನಿ ಗೌಡ ಅವರು ಗಿಲ್ಲಿ ನಟನ ಜೊತೆಗೆ ಸ್ನೇಹಿತೆಯಾಗಿಬಿಟ್ಟಿದ್ದಾರೆ. ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮುಂದೆ ಗಿಲ್ಲಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ಅಶ್ವಿನಿ ಗೌಡ ಒಟ್ಟು ಮೂರು ಗಿಫ್ಟ್‌ಗಳನ್ನು ಕೊಡಲು ಮುಂದಾಗಿದ್ದರು. ಎಷ್ಟೇ ಜಗಳ ಆದರು ನನ್ನ ಜೊತೆ ನಿಂತ ವ್ಯಕ್ತಿಗಳೆಂದರೆ ಧ್ರುವಂತ್ ಮತ್ತು ರಾಶಿಕಾ. ಇಬ್ಬರ ಜೊತೆಗಿನ ಬಾಂಧವ್ಯ ಯಾವತ್ತಿಗೂ ನಾನು ಮರೆಯಲು ಸಾಧ್ಯವಿಲ್ಲ. ಈ ಗೆಳತನವನ್ನು ಹೊರಗಡೆ ಹೋದಮೇಲೂ ಮುಂದುವರಿಸಿಕೊಂಡು ಹೋಗಲು ಇಷ್ಟ ಪಡುತ್ತೇನೆ ಎಂದು ಹೇಳಿ ಉಡುಗೊರೆ ಕೊಟ್ಟರು.
ಬಿಗ್‌ಬಾಸ್ ಸ್ಪರ್ಧಿಗಳು
ಮೂರನೇ ಉಡುಗೊರೆಯನ್ನು ಕೊಡುವ ವೇಳೆ, ‘ನನಗೆ ಗಿಲ್ಲಿ ತಾಯಿ ತುಂಬಾ ಮನಸ್ಸಿಗೆ ಹತ್ತಿರವಾದರು. ಬಹಳ ಮುಗ್ಧ ವ್ಯಕ್ತಿತ್ವ ಅವರದ್ದು. ಕುಟುಂಬ ಸದಸ್ಯರು ಮನೆಗೆ ಬಂದ ವಾರದಲ್ಲಿ ನಾನು ಹೆಚ್ಚು ಇಷ್ಟ ಪಟ್ಟ ವ್ಯಕ್ತಿತ್ವ ಗಿಲ್ಲಿ ತಾಯಿ ಅವರದ್ದು’ ಎಂದು ಭಾವುಕರಾದರು. ಈ ಸರವನ್ನು ನಾನು ಬಳಸಿದ್ದೇನೆ. ಇದು ನನ್ನ ನೆಚ್ಚಿನ ಸರ. ಇದನ್ನೇ ಉಡುಗೊರೆಯಾಗಿ ಗಿಲ್ಲಿ ತಾಯಿಗೆ ಕೊಡುತ್ತಿದ್ದೇನೆ. ಗಿಲ್ಲಿ ಇದು ನಿಮ್ಮ ತಾಯಿಗೆ ಕೊಡು. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ’ ಎಂದು ಸರವನ್ನು ಗಿಲ್ಲಿ ಕೈಗೆ ಇಟ್ಟರು.
ಸದ್ಯ ಬಿಗ್‌ಬಾಸ್ ಮನೆಯಲ್ಲಿ 7 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈಗಾಗಲೇ ಭಾನುವಾರದ ಸಂಚಿಕೆಯಲ್ಲಿ ರಾಶಿಕಾ ಶೆಟ್ಟಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಧನುಷ್ ಟಾಸ್ಕ್ ಗೆದ್ದು ಫೈನಲಿಸ್ಟ್ ಸ್ಥಾನದಲ್ಲಿದ್ದಾರೆ. ಉಳಿದಂತೆ ಕಾವ್ಯ, ಗಿಲ್ಲಿ ನಟ, ರಕ್ಷಿತಾ, ಧ್ರುವಂತ್, ಅಶ್ವಿನಿ ಗೌಡ ಹಾಗೂ ರಘು ಉಳಿದುಕೊಂಡಿದ್ದಾರೆ.
ಗಿಲ್ಲಿ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.