ADVERTISEMENT

‘ಬಾಬಿ’ ಧಾರಾವಾಹಿ ಖ್ಯಾತಿಯ ಗೌರವ್ ಖನ್ನಾ ಬಿಗ್‌ ಬಾಸ್ ಹಿಂದಿ–19ರ ವಿನ್ನರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2025, 10:06 IST
Last Updated 8 ಡಿಸೆಂಬರ್ 2025, 10:06 IST
<div class="paragraphs"><p>ಗೌರವ್ ಖನ್ನಾ,&nbsp;ಸಲ್ಮಾನ್ ಖಾನ್,&nbsp;ಫರ್ಹಾನ್ ಭಟ್</p></div>

ಗೌರವ್ ಖನ್ನಾ, ಸಲ್ಮಾನ್ ಖಾನ್, ಫರ್ಹಾನ್ ಭಟ್

   

ಬೆಂಗಳೂರು: ಬಿಗ್‌ ಬಾಸ್ ಹಿಂದಿ–19ರ ವಿಜೇತನಾಗಿ ಕಿರುತೆರೆ ನಟ ಹಾಗೂ ಮಾಡೆಲ್ ಗೌರವ್ ಖನ್ನಾ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.

ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಬಿಗ್‌ ಬಾಸ್ ಹಿಂದಿಯ ನಿರೂಪಕ ಆಗಿರುವ ನಟ ಸಲ್ಮಾನ್ ಖಾನ್ ಅವರು ವಿಜೇತರನ್ನು ಘೋಷಣೆ ಮಾಡಿದರು.

ADVERTISEMENT

ನಟಿ ಫರ್ಹಾನ್ ಭಟ್ ಅವರು ರನ್ನರ್ ಅಫ್ ಆಗಿ ಹೊರಹೊಮ್ಮಿದರು. ಗೌರವ್ ಖನ್ನಾ ಅವರಿಗೆ ಟ್ರೋಫಿ ಹಾಗೂ ₹50 ಲಕ್ಷ ನಗದು ಹಣ ಬಹುಮಾನವಾಗಿ ಸಿಗಲಿದೆ. ಹಾಗೆಯೇ ಫರ್ಹಾನ್ ಭಟ್ ಅವರಿಗೆ ಟ್ರೋಫಿ ಹಾಗೂ ₹25 ಲಕ್ಷ ನಗದು ಹಣ ಬಹುಮಾನವಾಗಿ ಸಿಗಲಿದೆ.

ಪ್ರಣೀತ್ ಮೊರೆ ಮೂರನೇ ಸ್ಥಾನ, ಅಮಾಲ್ ಮಲೀಕ್ ನಾಲ್ಕನೇ ಸ್ಥಾನ ಹಾಗೂ ತಾನ್ಯಾ ಮಿತ್ತಲ್ ಅವರು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಉತ್ತರ ಪ್ರದೇಶದ ಕಾನ್ಪುರ ಮೂಲದ ಗೌರವ್ ಖನ್ನಾ ಅವರು ಹಿಂದಿ ಧಾರಾವಾಹಿ ಜಗತ್ತಿನಲ್ಲಿ ಪ್ರಮುಖ ನಟ ಎಂದು ಹೆಸರು ಮಾಡಿದ್ದಾರೆ. ಕುಂಕುಮ್, ಬಾಬಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಾಯಕ ನಟನಾಗಿ ಬಣ್ಣ ಹಚ್ಚಿ ಇದೀಗ ಬಿಗ್ ಬಾಸ್‌–19 ವಿಜೇತರಾಗಿ ಮಿಂಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.