ಬೆಂಗಳೂರು: ಬಿಗ್‌ಬಾಸ್ 100 ದಿನ ದಾಟಿದ್ದು, ಕಾರ್ಯಕ್ರಮ ಮುಗಿಯಲು ಇನ್ನೆರಡು ವಾರಗಳು ಮಾತ್ರ ಬಾಕಿ ಇವೆ. ಕಳೆದ ವಾರ ಚೈತ್ರಾ ಕುಂದಾಪುರ ಮನೆಯಿಂದ ಹೊರಹೋಗಿದ್ದಾರೆ. ಈ ವಾರದ ಅಂತ್ಯದ ಒಳಗೆ ವಾರದ ಮಧ್ಯೆ ಒಬ್ಬರು ಹೊರಹೋಗಲಿದ್ದಾರೆ.
ಮಿಡ್ ವೀಕ್ ಎಲಿಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ಬಿಗ್ ಬಾಸ್ ಟಾಸ್ಕ್‌ವೊಂದನ್ನು ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ಗೆದ್ದ ಅಭ್ಯರ್ಥಿ ಎಲಿಮಿನೇಷನ್‌ನಿಂದ ಪಾರಾಗಿ ಸೋತ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ.
ಸ್ನೇಹದಲ್ಲಿ ಬಿರುಕು
ಕುಟುಂಬ ಸದಸ್ಯರ ಭೇಟಿಯ ಬಳಿಕ ಉಗ್ರಂ ಮಂಜು ಮತ್ತು ಗೌತಮಿ ನಡುವಿನ ಸ್ನೇಹ ಹದಗೆಟ್ಟಿತ್ತು. ಈಗ ತ್ರಿವಿಕ್ರಮ್ ಮತ್ತು ಭವ್ಯಾ ನಡುವಿನ ಸ್ನೇಹದಲ್ಲೂ ಬಿರುಕು ಬಿಟ್ಟಿದೆ.
ಭವ್ಯ ಮತ್ತು ಮೋಕ್ಷಿತಾ ಜತೆಯಾಗಿ ತಂತ್ರಹೂಡಿ ರಜತ್ ಅವರನ್ನು ಟಾಸ್ಕ್‌ನಿಂದ ಹೊರಗಿಟ್ಟ ಕುರಿತು ಮಾತನಾಡಿದ ತ್ರಿವಿಕ್ರಮ್ ‘ 105 ವಾರ ಇಲ್ಲದವರ ಜತೆ ಸ್ನೇಹ ಬೆಳೆಸಿ ಒಬ್ಬರನ್ನು ಹೊರಗಿಡುವುಡು ಎಷ್ಟು ಸರಿ. ಮೊದಲ ದಿನ ಇದ್ದ ರೀತಿಯಲ್ಲಿ ನೀನಿಲ್ಲ’ ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಭವ್ಯಾ, ಏನೋನೋ ತಲೆಗೆ ಹಾಕಿಕೊಂಡು ನೀವೇ ಹಾಳಾಗುತ್ತಿದ್ದೀರಿ’ ಎನ್ನುತ್ತಾರೆ.
ಭವ್ಯಾ ಜೈಲು ಪಾಲು
ಟಾಸ್ಕ್ ನಡುವೆ ಹನುಮಂತು ಅವರ ಮೇಲೆ ಕೈ ಮಾಡಿದ್ದಕ್ಕಾಗಿ ಭವ್ಯಾ 2 ದಿನಗಳ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಸುದೀಪ್ ಭವ್ಯಾ ಅವರಿಗೆ ಕಳಪೆ ಬಟ್ಟೆ ತೊಟ್ಟು ಜೈಲಿನಲ್ಲಿ ಇರುವಂತೆ ಸೂಚಿಸಿದ್ದರು. ಭಾನುವಾರದ ಸಂಚಿಕೆಯಲ್ಲೂ ಭವ್ಯಾ ಕಳಪೆ ಉಡುಪು ತೊಟ್ಟುಕೊಂಡೇ ಕುಳಿತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.