
ಗಿಲ್ಲಿ ನಟ, ಕಿಚ್ಚ ಸುದೀಪ್, ಅಭಿಷೇಕ್ ಶ್ರೀಕಾಂತ್
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ ಸೀಸನ್ 12 ಅಂತ್ಯ ಕಂಡಿದೆ. ಭಾನುವಾರದ (ಜ.18) ಸಂಚಿಕೆಯಲ್ಲಿ ಗಿಲ್ಲಿ ನಟ ಬಿಗ್‌ಬಾಸ್ ಸೀಸನ್ 12ರ ವಿಜೇತರಾಗಿ ಹೊರ ಹೊಮ್ಮಿದ್ದರು. ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದರು. ಆದರೆ ಗಿಲ್ಲಿ ಗೆದ್ದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಗಿಲ್ಲಿ ಗೆದ್ದಿರುವ ಬಗ್ಗೆ, ಅವನ ಬಳಿ ಕಾರುಗಳಿವೆ, ಗಿಲ್ಲಿ ಬಡವನಲ್ಲ, ಸಿಂಪತಿಯಿಂದ ಟ್ರೋಫಿ ಗೆದ್ದಿದ್ದಾನೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿದ್ದವು.
ಆ ಬೆಳವಣಿಗೆಗಳನ್ನು ಗಮನಿಸಿದ ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಈ ಕುರಿತು ಮಾತನಾಡಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡ ನಟ ಅಭಿಷೇಕ್ ಶ್ರೀಕಾಂತ್ ಅವರು, ‘ಗಿಲ್ಲಿ ಬಡವನಾದರೇನು? ಆತನ ಬಳಿ ಕಾರುಗಳಿದ್ದರೇನು? ನನಗಂತೂ ಅವನು ಸಿಂಪತಿಯಿಂದ ಗೆದ್ದ ಅಂತ ಅನಿಸೋದಿಲ್ಲ’ ಎಂದಿದ್ದಾರೆ.
ಅಭಿಷೇಕ್ ಶ್ರೀಕಾಂತ್ ಹೇಳಿದ್ದೇನು?
‘ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಡಿಯೊಗಳು ಹರಿದಾಡುತ್ತಿವೆ. ಒಂದು ಕಡೆ ಗಿಲ್ಲಿ ಬಡವ ಅಂತ ಹೇಳುತ್ತಾರೆ. ಇನ್ನೊಂದು ಕಡೆ ಆತನ ಬಳಿ ಕಾರುಗಳು ಇವೆ ಅಂತಾರೆ. ಆದರೆ ನನ್ನ ಪ್ರಕಾರ, ಗಿಲ್ಲಿ ಬಡವನಾದರೇನು? ಆತನ ಬಳಿ ಕಾರುಗಳಿದ್ದರೇನು? ನನಗಂತೂ ಅವನು ಸಿಂಪತಿಯಿಂದ ಗೆದ್ದ ಅಂತ ಅನಿಸೋದಿಲ್ಲ. ಅವನ ಬಳಿ ಪ್ರತಿಭೆ ಇದೆ. ನಮಗೆಲ್ಲಾ ಒಬ್ಬರನ್ನೋ, ಇಬ್ಬರನ್ನೋ ನಗಿಸುವುದೇ ಕಷ್ಟ, ಅಂತಹದರಲ್ಲಿ ಅವನು ಇಡೀ ಕರ್ನಾಟಕವನ್ನೇ ನಗಿಸಿದ್ದಾನೆ. ಜನ ಖುಷಿಯಿಂದ ಅವನಿಗಾಗಿ ಬಿಗ್‌ಬಾಸ್ ಶೋ ನೋಡುತ್ತಿದ್ದರು. ಅದಕ್ಕೆ ಅವನನ್ನು ಗೆಲ್ಲಿಸಿದ್ದಾರೆ. ನನಗಂತೂ ಗಿಲ್ಲಿ ಗೆದ್ದಿರುವುದು ತುಂಬಾ ಖುಷಿ ಇದೆ. ಅಭಿನಂದನೆಗಳು ಗಿಲ್ಲಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.