ADVERTISEMENT

BBK12: ಬಿಗ್‌ಬಾಸ್‌ ಮನೆಗೆ ಕಿಚ್ಚನ ಆಗಮನ: ಪ್ರೊಮೋದಲ್ಲಿ ಸುದೀಪ್‌ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2025, 7:38 IST
Last Updated 27 ಸೆಪ್ಟೆಂಬರ್ 2025, 7:38 IST
<div class="paragraphs"><p> ಚಿತ್ರ:&nbsp;<strong><a href="https://www.instagram.com/colorskannadaofficial/">colorskannadaofficial</a>&nbsp;</strong>ನಟ ಸುದೀ‍ಪ್‌</p></div>

ಚಿತ್ರ: colorskannadaofficial ನಟ ಸುದೀ‍ಪ್‌

   

Bigg Boss Kannada 12: ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿಯ ಮೊದಲ ಪ್ರೊಮೋ ಬಿಡುಗಡೆಯಾಗಿದೆ. ಸೆಪ್ಟೆಂಬರ್ 28ಕ್ಕೆ ಬಿಗ್‌ಬಾಸ್ ಓಪನಿಂಗ್‌ ಪಡೆದುಕೊಳ್ಳಲಿದೆ. ಈಗ ಕಲರ್ಸ್ ಕನ್ನಡ ವಾಹಿನಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕಿಚ್ಚನ ಮೊದಲ ಪ್ರೊಮೋವನ್ನು ಬಿಡುಗಡೆ ಮಾಡಿದೆ.

ಚಿತ್ರ: colorskannadaofficial ನಟ ಸುದೀ‍ಪ್‌

ADVERTISEMENT

ಹೌದು, ಇಷ್ಟು ದಿನ ಕುತೂಹಲದಿಂದ ಕಾಯುತ್ತಿದ್ದ ವೀಕ್ಷಕರಿಗೆ ಬಿಗ್‌ಬಾಸ್‌ ತಂಡ ಮೊದಲ ಪ್ರೋಮೊವನ್ನು ಬಿಡುಗಡೆ ಮಾಡುವ ಮೂಲಕ ಶುಭ ಸುದ್ದಿ ನೀಡಿದೆ. ಬಿಡುಗಡೆಯಾದ ಮೊದಲ ಪ್ರೋಮೊದಲ್ಲಿ ಕಿಚ್ಚ ಸುದೀಪ್‌ ಅವರು ಬಿಗ್‌ಬಾಸ್‌ ಹೊಸ ಮನೆಗೆ ಆಗಮಿಸಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಬಿಗ್‌ಬಾಸ್‌ ಅರಮನೆಯಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಅನಾವರಣಗೊಳಿಸಲಾಗಿದೆ.

ಚಿತ್ರ: colorskannadaofficial ನಟ ಸುದೀ‍ಪ್‌

ಪ್ರೋಮೊದಲ್ಲಿ ಕಿಚ್ಚ ಸುದೀಪ್‌ ಹೇಳಿದ್ದೇನು?

‘ನಮ್ಮ ರಿಚ್‌ ಆಗಿರುವ ಕರ್ನಾಟಕ ಒಂದೇ ಜಾಗದಲ್ಲಿ ಸ್ಕೆಚ್ ಮಾಡಿದರೇ ನೋಡೋದಕ್ಕೆ ಹೇಗಿರುತ್ತದೆ ಎಂದು ನೀವೇನಾದ್ರೂ ನೋಡಬೇಕು ಅಂದರೆ.. ಹೀಗೆ ಇರುತ್ತದೆ. ಒಂದು ಅರಮನೆಯನ್ನು ಉಳಿಸಿಕೊಳ್ಳುವುದಕ್ಕೆ ಎಷ್ಟೋ ಯುದ್ಧಗಳು ನಡೆದು ಹೋಗಿವೆ. ಈ ಅರಮನೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳುವುದಕ್ಕೆ ಬಹಳ ಯುದ್ಧಗಳು ನಡೆಯೋದಿದೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್‌ಬಾಸ್‌ ಮನೆಯಲ್ಲಿ ಅಸಲಿ ಹಬ್ಬ ಈಗ ಶುರು’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.