ADVERTISEMENT

BBK12: ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಒಂಟಿ-ಜಂಟಿಗಳ ನಡುವೆ ಜಿದ್ದಾಜಿದ್ದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2025, 11:18 IST
Last Updated 6 ಅಕ್ಟೋಬರ್ 2025, 11:18 IST
<div class="paragraphs"><p>ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್</p></div>

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

   

ಕನ್ನಡದ ಬಿಗ್‌ಬಾಸ್‌ ಸೀಸನ್ 12 ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಮುಗಿಯುತ್ತಿದ್ದಂತೆ ಸರ್ಧಿಗಳು ಕೊಂಚ ರೆಬೆಲ್ ಆಗಿದ್ದಾರೆ. ಈಗ ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒಂಟಿ-ಜಂಟಿಗಳ ಮಧ್ಯೆ ಪೈಪೋಟಿ ಜೋರಾಗಿದೆ.

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ADVERTISEMENT

ಹೌದು, ಈಗ ಬಿಗ್‌ಬಾಸ್‌ ಮನೆಯಲ್ಲಿ ಒಟ್ಟು 17 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈಗಾಗಲೇ ಮೊದಲ ಫೈನಲಿಸ್ಟ್ ಅಭ್ಯರ್ಥಿ ಆಗಿರುವ ಕಾಕ್ರೋಚ್ ಸುಧಿಗೆ ಬಿಗ್​ಬಾಸ್​ ವಿಶೇಷ ಅಧಿಕಾರ ಕೊಟ್ಟಿದ್ದಾರೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮೊದಲ ಪ್ರೊಮೋದಲ್ಲಿ ಕಾಕ್ರೋಚ್ ಸುಧಿಗೆ ಬಿಗ್‌ಬಾಸ್‌ ಅಸುರಾಧಿಪತಿ ಪಟ್ಟ ಕೊಟ್ಟಿದ್ದಾರೆ. ಇದೀಗ ಕಲರ್ಸ್‌ ಕನ್ನಡ ತನ್ನ ಖಾತೆಯಲ್ಲಿ ಮತ್ತೊಂದು ಪ್ರೊಮೋ ಹಂಚಿಕೊಂಡಿದೆ.

ಬಿಡುಗಡೆಯಾದ ಪ್ರೊಮೋದಲ್ಲಿ ಬಿಗ್‌ಬಾಸ್ ಮನೆಯಲ್ಲಿ ಒಂಟಿ-ಜಂಟಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳೋಕೆ ಯುದ್ಧಕಾಂಡವನ್ನೇ ಶುರು ಮಾಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಜಂಟಿಗಳು ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಕಾರಣಕ್ಕೆ ಈ ಗಲಾಟೆ ನಡೆದಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಊಟ ಕೊಡುವ ಅವಶ್ಯಕತೆ ಇಲ್ಲ ಎಂದು ಒಂಟಿ ತಂಡದವರಾದ ಅಶ್ವಿನಿ ಹಾಗೂ ಜಾಹ್ನವಿ ಹೇಳಿದ್ದಾರೆ. ಆಗ ಜಂಟಿ ತಂಡದವರು ಒಂಟಿ ತಂಡದ ಜತೆ ಜಗಳಕ್ಕೆ ಇಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.