ADVERTISEMENT

BBK9:ಮಧ್ಯರಾತ್ರಿಯಲ್ಲಿ ಹೊರಬಿದ್ದ ಆರ್ಯವರ್ಧನ್.. ಫಿನಾಲೆಗೆ ಈ ಐವರ ಎಂಟ್ರಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 2:54 IST
Last Updated 28 ಡಿಸೆಂಬರ್ 2022, 2:54 IST
   

ಬೆಂಗಳೂರು: ಬಿಗ್ ಬಾಸ್ 9ನೇ ಆವೃತ್ತಿಯ 14ನೇ ವಾರದ ಮಧ್ಯಭಾಗದಲ್ಲಿ ಒಬ್ಬರ ಎಲಿಮಿನೇಟ್ ಆಗಿದ್ದು, ಕಾರ್ಯಕ್ರಮಕ್ಕೆ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ.

ಹೌದು, ಯಶಸ್ವಿಯಾಗಿ 13 ವಾರ ದಾಟಿ 14ನೇ ಮತ್ತು ಅಂತಿಮವಾರಕ್ಕೆ ಕಾಲಿಟ್ಟಿದ್ದ ಆರ್ಯವರ್ಧನ್ ಗುರೂಜಿ ಮನೆಯಿಂದ ಹೊರಹೋಗಿದ್ದಾರೆ.

94ನೇ ದಿನ ಮಧ್ಯರಾತ್ರಿ ವಿಶಿಷ್ಟ ರೀತಿಯಲ್ಲಿ ಎಲಿಮಿನೇಶನ್ ಪ್ರಕ್ರಿಯೆ ನಡೆಸಿದ ಬಿಗ್ ಬಾಸ್, ಆರ್ಯವರ್ಧನ್ ಅವರನ್ನು ಹೊರಗೆ ಕಳುಹಿಸಿದರು.

ADVERTISEMENT

ಹೇಗಿತ್ತು ಎಲಿಮಿನೇಶನ್?

ಫಿನಾಲೆಯಲ್ಲಿ ಐದು ಜನರಿಗೆ ಮಾತ್ರ ಜಾಗ ಇರುವುದರಿಂದ ಒಬ್ಬರ ಪ್ರಯಾಣ ಇಂದು ಅಂತ್ಯವಾಗಲಿದೆ ಎಂದು ಬಿಗ್ ಬಾಸ್ ಘೋಷಿಸಿದರು.

ಬಿಗ್ ಬಾಸ್ ಮನೆಯಲ್ಲಿ ಒಂದು ವೇದಿಕೆ ನಿರ್ಮಾಣ ಮಾಡಿ, ಮ್ಯೂಸಿಕ್ ಹಾಕಲಾಗಿತ್ತು. ಅದರ ಮೇಲೆ ಒಬ್ಬೊಬ್ಬರನ್ನೇ ಬಂದು ನಿಲ್ಲಲು ಸೂಚಿಸಲಾಗಿತ್ತು. ವೇದಿಕೆ ಭೂಮಿಯ ಒಳಗೆ ಹೋಗುವ ಮತ್ತು ಮೇಲೇಳುವ ಮೂಲಕ ಸ್ಪರ್ಧಿಗಳ ಟೆನ್ಶನ್ ಹೆಚ್ಚಿಸಿತ್ತು. ವೇದಿಕೆ ಮೇಲೆ ಬಂದಾಗಯಾವ ಸದಸ್ಯ ಕಾಣಿಸುವುದಿಲ್ಲವೋಅವರು ಎಲಿಮಿನೇಟ್ ಆಗಿರುತ್ತಾರೆ ಎಂದು ಬಿಗ್ ಬಾಸ್ ಹೇಳಿದ್ದರು. ಈ ರೀತಿ ಎರಡು ಮೂರು ಸುತ್ತು ನಡೆದ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿದ್ದಾರೆ.

ಆರ್ಯವರ್ಧನ್ ಕಣ್ಮರೆಯಾಗುತ್ತಿದ್ದಂತೆ ಅವರನ್ನು ಅಪ್ಪ ಎಂದು ಕರೆಯುತ್ತಿದ್ದ ರೂಪೇಶ್ ಶೆಟ್ಟಿ ತೀವ್ರ ದುಃಖ ವ್ಯಕ್ತಪಡಿಸಿದರು. ಅತ್ತು ಗೋಳಾಡಿದರು. ಅವರನ್ನು ಸಮಾಧಾನಪಡಿಸಲು ಉಳಿದ ಸದಸ್ಯರು ಹರಸಾಹಸಪಡಬೇಕಾಯಿತು.

ಮನೆಯಲ್ಲಿ ಉಳಿದಿರುವ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ದೀಪಿಕಾ ದಾಸ್ ಮತ್ತು ರೂಪೇಶ್ ರಾಜಣ್ಣ ಫೈನಲ್ ಹಂತಕ್ಕೆ ಬಂದಿದ್ದಾರೆ. ಶುಕ್ರವಾರ ಮತ್ತು ಶನಿವಾರ ಫಿನಾಲೆ ನಡೆಯಲಿದ್ದು, ಸೀಸನ್ 9ರ ವಿನ್ನರ್ ಯಾರು ಎಂಬುದು ಗೊತ್ತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.