
ಅಶ್ವಿನಿ ಗೌಡ
ಚಿತ್ರ: ಜಿಯೋ ಹಾಟ್‌ಸ್ಟಾರ್
ಬಿಗ್‌ಬಾಸ್ 12ನೇ ಸೀಸನ್‌ನ ಮೊದಲ ಕಳಪೆಯಾಗಿರುವ ಅಶ್ವಿನಿ ಗೌಡ ನಿನ್ನೆಯ (ಶುಕ್ರವಾರ) ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.
ಅಶ್ವಿನಿ ಗೌಡಗೆ ಕಳಪೆ ಪಟ್ಟ ಸಿಗುತ್ತಿದ್ದಂತೆ ವರ್ತನೆ ಬದಲಾಗಿದೆ. ಬಿಗ್‌ಬಾಸ್ ಮನೆಯ ನಿಯಮದ ಪ್ರಕಾರ, ಕಳಪೆ ಪಡೆದುಕೊಂಡ ಸ್ಪರ್ಧಿ ರಾಗಿ ಗಂಜಿ ಹಾಗೂ ನೀರು ಬಿಟ್ಟು ಯಾವುದೇ ಕಾರಣಕ್ಕೂ ಏನನ್ನು ಸೇವಿಸುವಂತಿಲ್ಲ. ಶೌಚಾಲಯಕ್ಕೆ ಹೋಗಬೇಕಾದರೆ ಮನೆಯ ಕ್ಯಾಪ್ಟನ್‌ನನ್ನು ಕರೆದು ಬೀಗ ತೆಗೆಸಿಕೊಂಡು ಹೋಗಬೇಕು. ಜೊತೆಗೆ ಕಳಪೆ ಪಟ್ಟ ಸಿಕ್ಕಿರುವ ಸದಸ್ಯ ತರಕಾರಿಗಳನ್ನು ತಾವೇ ಕತ್ತರಿಸಬೇಕು. ಆದರೆ ಈ ಎಲ್ಲ ನಿಯಮಗಳನ್ನು ಅಶ್ವಿನಿ ಗೌಡ ಮುರಿದಿದ್ದಾರೆ.
ಇದರ ಜೊತೆಗೆ ಕಳಪೆ ವಸ್ತ್ರ ಧರಿಸಿಕೊಂಡ ಮೇಲು ಸೇಬು ಹಣ್ಣು, ಕಜ್ಜಾಯ ತಿಂದಿದ್ದಾರೆ. ಪದೇ ಪದೇ ಮನೆಯ ಕ್ಯಾಪ್ಟನ್‌ಗೆ ಕರೆದು ‘ನಾನು ಶೌಚಾಲಯಕ್ಕೆ ಹೋಗಬೇಕು ಬಾಗಿಲು ತೆಗೆಯಿರಿ ಇಲ್ಲವಾದರೆ ನಾನೇ ಆಚೆ ಬಂದು ನಿಯಮ ಉಲ್ಲಂಘನೆ ಮಾಡುತ್ತೇನೆ’ ಎಂದು ಎಚ್ಚರಿಕೆ ಕೊಡುತ್ತಾರೆ.
ಮನೆಯ ಕ್ಯಾಪ್ಟನ್ ಎಷ್ಟು ಬಾರಿ ಹೇಳಿದರೂ ಕೇಳದೆ ಅಶ್ವಿನಿ ಗೌಡ ಕಿರಿಕ್ ಮಾಡಿದ್ದಾರೆ. ಅಷ್ಟೇ ಅಲ್ಲ ಗಿಲ್ಲಿಗೆ ‘ನಂಗೂ ನಿನ್ನ ಪಂಚೆ ಎಳೆಯೋಕೆ ಬರುತ್ತೆ ಥೂ’ ಎಂದು ಬೈದಿದ್ದಾರೆ. ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಈ ಬಗ್ಗೆ ಮಾತನಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.