ADVERTISEMENT

BBK12: ಬಿಗ್‌ಬಾಸ್ ಮನೆಯಲ್ಲಿ ಜೋರಾಯ್ತು ಅಶ್ವಿನಿ–ಜಾಹ್ನವಿ ನಡುವೆ ಜಿದ್ದಾಜಿದ್ದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2025, 10:14 IST
Last Updated 28 ಅಕ್ಟೋಬರ್ 2025, 10:14 IST
<div class="paragraphs"><p>ಜಾಹ್ನವಿ ಹಾಗೂ ಅಶ್ವಿನಿ ಗೌಡ</p></div>

ಜಾಹ್ನವಿ ಹಾಗೂ ಅಶ್ವಿನಿ ಗೌಡ

   

ಬಿಗ್‌ಬಾಸ್‌ ಆರಂಭವಾಗಿ ನಾಲ್ಕು ವಾರಗಳು ಕಳೆದಿವೆ. ಇಷ್ಟು ದಿನ ಬಿಗ್‌ಬಾಸ್‌ ಮನೆಯಲ್ಲಿ ಸ್ನೇಹಿತರಾಗಿದ್ದ ಅಶ್ವಿನಿ ಗೌಡ ಹಾಗೂ ಜಾಹ್ನವಿ ಒಬ್ಬರಿಗೊಬ್ಬರು ಬದ್ಧ ವೈರಿಗಳಂತೆ ವರ್ತಿಸುತ್ತಿದ್ದಾರೆ. ಈ ಇಬ್ಬರ ನಡುವಿನ ಮನಸ್ತಾಪಕ್ಕೆ ಬಿಗ್‌ಬಾಸ್‌ ಕೊಟ್ಟ ಒಂದು ಟಾಸ್ಕ್ ಕಾರಣವಾಗಿದೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿ.ಬಿ ಕಾಲೇಜ್‌ನಲ್ಲಿ ಬಿಗ್‌ಬಾಸ್‌ ಪ್ರೀತಿ ಎಂದರೇನು ಎಂಬ ಪ್ರಶ್ನೆಯನ್ನು ಸ್ಪರ್ಧಿಗಳಿಗೆ ಕೇಳಿದ್ದಾರೆ. ಆಗ ಒಬ್ಬೊಬ್ಬರು ಪ್ರೀತಿ ಅರ್ಥ ಏನೆಂದು ಹೇಳಿದ್ದಾರೆ. ಆಗ ಅಶ್ವಿನಿ ಗೌಡ ‘ನಿಸ್ವಾರ್ಥದಿಂದ ನಾವು ಕೊಡುವುದೇ ಪ್ರೀತಿ. ಎಷ್ಟೋ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ಬೆನ್ನ ಹಿಂದೆ ಯಾವಾಗಲೂ ಪಿತೂರಿ ಮಾಡುವ ದುಶ್ಮನ್‌ಗಳ ಮೇಲೂ ಪ್ರೀತಿ ಆಗಬಹುದು’ ಎಂದರು. ಇದಾದ ಬಳಿಕ ಜಾಹ್ನವಿ ಪ್ರೀತಿನ ಸುಲಭವಾಗಿ ಗಳಿಸಿ ಬಿಡಬಹುದು. ಆದರೆ ಅದನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ ಎಂದರು.

ADVERTISEMENT

ಅಶ್ವಿನಿ ಗೌಡ ಹಾಗೂ ಜಾಹ್ನವಿ ಬಿಗ್‌ಬಾಸ್‌ ಮನೆಗೆ ಒಂಟಿಗಳಾಗಿ ಪ್ರವೇಶಿಸಿದ್ದರು. ದಿನ ಕಳೆದಂತೆ ಇಬ್ಬರ ಸ್ನೇಹ ಬೇರೆ ಹಂತಕ್ಕೆ ಕರೆದುಕೊಂಡು ಹೋಗಿತ್ತು. ಯಾರೇ ಬಂದರು ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. ಆದರೆ ನಿನ್ನೆ ಸಂಚಿಕೆಯಲ್ಲಿ ನಡೆದ ಚರ್ಚೆಯಲ್ಲಿ ಎಲ್ಲವೂ ಬದಲಾಗಿದೆ. ಇಬ್ಬರ ಮಧ್ಯೆ ಮನಸ್ತಾಪ ಹೆಚ್ಚುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.