ರಾಶಿಕಾ ಮತ್ತು ಮಂಜು ಭಾಷಿಣಿ
ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ ಸೀಸನ್ 12 ಶುರುವಾಗಿ 12 ದಿನಗಳು ಕಳೆದಿವೆ. ಈ ಬಾರಿ ಬಿಗ್‌ಬಾಸ್ ‘Expect the Unexpected’ (ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಿ) ಥೀಮ್‌ನೊಂದಿಗೆ ಈ ಬಾರಿಯ ಕನ್ನಡದ ಬಿಗ್‌ಬಾಸ್ ಸೀಸನ್ 12 ಶುರುವಾಗಿದೆ. ಜಂಟಿ ಹಾಗೂ ಒಂಟಿ ಎಂಬ ಪರಿಕಲ್ಪನೆಯೊಂದಿಗೆ ಈ ಬಾರಿ ಬಿಗ್‌ಬಾಸ್ ಆರಂಭಗೊಂಡಿದೆ.
ಹೀಗೆ ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆಯಲ್ಲಿ ಅನಿರೀಕ್ಷಿತ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಇದೀಗ ಈ ಬಿಗ್‌ಬಾಸ್ ಸೀಸನ್ 12ರ ವಾರದ ಮೊದಲ ಕಳಪೆ ಪಟ್ಟ ರಾಶಿಕಾ ಹಾಗೂ ಮಂಜು ಭಾಷಿಣಿಗೆ ಸಿಕ್ಕಿದೆ.
ಬಿಗ್‌ಬಾಸ್ ಸರ್ಧಿಗಳು
ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಹೊಸ ಪ್ರೊಮೋದಲ್ಲಿ ಬಿಗ್‌ಬಾಸ್, ಒಬ್ಬ ಒಂಟಿ ಅಥವಾ ಜಂಟಿಯನ್ನು ಕಳಪೆ ಪ್ರದರ್ಶನ ನೀಡಿದವರು ಎಂದು ಘೋಷಿಸಿ ಜೈಲಿಗೆ ಕಳುಹಿಸಬೇಕು ಎಂದರು. ಇದಾದ ಬಳಿಕ ಅಶ್ವಿನಿ ಗೌಡ, ರಾಶಿಕಾ ಹಾಗೂ ಮಂಜು ಭಾಷಿಣಿ ಹೆಸರನ್ನು ತೆಗೆದುಕೊಂಡಿದ್ದಾರೆ.
ಮಂಜು ಭಾಷಿಣಿ ಹಾಗೂ ರಾಶಿಕಾ ಎಲ್ಲಿಯೂ ಮನರಂಜನೆ ನೀಡಲಿಲ್ಲ ಬಿಗ್‌ಬಾಸ್. ಈ ಇಬ್ಬರು ಎಲ್ಲೋ ಕಳೆದು ಹೋಗಿದ್ದರು ಅನಿಸಿತು ಎಂದು ಹೇಳಿದ್ದಾರೆ. ಈ ಇಬ್ಬರ ಹೆಸರನ್ನು ಹೇಳುತ್ತಿದ್ದಂತೆ ಮನೆಮಂದಿ ಅಚ್ಚರಿಗೊಂಡಿದ್ದಾರೆ. ಜೈಲಿಗೆ ಹೋದ ರಾಶಿಕಾ ಕಣ್ಣೀರು ಹಾಕುತ್ತಾ, ‘ಚೇಂಜ್ ಮಾಡ್ತಾರೆ ನೋಡಿ ಈಗ ಆಟ. ನಾನಂತೂ ಅವರು ಹೇಳಿದ್ದನ್ನು ಮಾಡೋದಿಲ್ಲ ಅಂತ ಕುಳಿತುಕೊಳ್ಳುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.