ಚೈತ್ರಾ ಕುಂದಾಪುರ
ಬೆಂಗಳೂರು: 12ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ರಂಗು ಹೆಚ್ಚಾಗುತ್ತಿದೆ. ಬಿಗ್ ಬಾಸ್ ನೀಡುತ್ತಿರುವ ಟಾಸ್ಕ್‌ಗಳಲ್ಲಿ ಗೆಲ್ಲಬೇಕೆಂಬ ಜಟಾಪಟಿಯಲ್ಲಿ ಸ್ಪರ್ಧಿಗಳ ನಡುವೆ ವಾಗ್ವಾದಗಳು ನಡೆದಿವೆ. ಇದರ ನಡುವೆ ಈ ವಾರದ ಕಳಪೆ ಹಾಗೂ ಉತ್ತಮ ಪಟ್ಟ ನಿರ್ಧಾರವಾಗಿದೆ.
ಈ ವಾರ ಬಿಗ್ ಬಾಸ್ ನೀಡಿದ್ದ ಕೆಲವು ಟಾಸ್ಕ್‌ಗಳ ಉಸ್ತುವಾರಿಯಾಗಿದ್ದ ಚೈತ್ರಾ ಕುಂದಾಪುರ ತಂಡಗಳ ನಡುವೆ ಪಕ್ಷಪಾತಿ ನೀತಿ ಅನುಸರಿಸಿದರು ಎಂದು ಹೇಳಿರುವ ಮನೆಯ ಇತರ ಸ್ಪರ್ಧಿಗಳು ಈ ವಾರದ ಕಳಪೆ ಪಟ್ಟವನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಈ ಮೂಲಕ ಬಿಗ್‌ಬಾಸ್ ಮನೆಯಲ್ಲಿ ಮೂರನೇ ಬಾರಿಗೆ ಕಳಪೆ ಪಟ್ಟ ಹೊತ್ತು ಜೈಲು ಸೇರಿ ಅಪಖ್ಯಾತಿಗೆ ಒಳಗಾಗಿದ್ದಾರೆ.
ಆಟದ ಉಸ್ತುವಾರಿಯಲ್ಲಿ ನೀವು ಪಕ್ಷಪಾತಿಯಾಗಿ ನಡೆದುಕೊಂಡಿದ್ದೀರಾ ಎಂದು ಮೋಕ್ಷಿತಾ ಹೇಳಿದ್ದಾರೆ. ಇದುವರೆಗೂ ಆಟದಲ್ಲಿ ಇಷ್ಟೊಂದು ಫೌಲ್‌ಗಳನ್ನು ನಾನು ನೋಡಿಲ್ಲ, ಅಷ್ಟು ಫೌಲ್‌ಗಳನ್ನು ನಾನು ನೋಡಿದೆ ಎಂದು ಧನರಾಜ್ ಹೇಳಿದ್ದಾರೆ. ಉಳಿದಂತೆ ರಜತ್, ಐಶ್ವರ್ಯಾ ಮತ್ತು ಹನುಮಂತ ಕೂಡಾ ಚೈತ್ರಾಗೆ ಕಳಪೆ ಪಟ್ಟ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಚೈತ್ರಾ ಟಾರ್ಗೆಟ್ ಮಾಡುತ್ತಿದ್ದಾರೆ, ಹೊರಗಿನ ಜನರು ನೋಡ್ತಾರೆ ಎಂದು ಉತ್ತರಿಸಿದ್ದಾರೆ.
ಇದು ನನಗೆ ಅಭ್ಯಾಸವಾಗಿದೆ ಎಂದು ಹೇಳುತ್ತಲೇ ಮೂರನೇ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ಕಳಪೆ ಪಟ್ಟ ಹೊತ್ತು ಚೈತ್ರಾ ಜೈಲು ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.