ADVERTISEMENT

ಬಿಗ್‌ಬಾಸ್‌ ನನಗೆ ಪುನರ್ಜನ್ಮ ಕೊಟ್ಟಿದೆ: ಕಣ್ಣೀರಿಟ್ಟ ಚೈತ್ರಾ ಕುಂದಾಪುರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2025, 7:16 IST
Last Updated 28 ನವೆಂಬರ್ 2025, 7:16 IST
<div class="paragraphs"><p>ಚೈತ್ರಾ ಕುಂದಾಪುರ</p></div>

ಚೈತ್ರಾ ಕುಂದಾಪುರ

   

ಚಿತ್ರ: ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿಗೆ ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಕುಂದಾಪುರ, ರಜತ್, ಮೋಕ್ಷಿತಾ ಅತಿಥಿಗಳಾಗಿ ಬಂದಿದ್ದಾರೆ. ತಮಗೆ ಬಿಗ್‌ಬಾಸ್‌ನಿಂದ ಏನೆಲ್ಲಾ ಆಯ್ತು? ಈ ಶೋ ತಮಗೆ ಏನೆಲ್ಲಾ ಕೊಟ್ಟಿದೆ ಎಂಬುವುದರ ನೆನಪನ್ನು ಮೆಲುಕು ಹಾಕಿದ್ದಾರೆ.

ADVERTISEMENT

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್​​ಬಾಸ್ ತಮ್ಮ ಜೀವನದಲ್ಲಿ ಮಹತ್ವ ಆಗಿದ್ದು ಹೇಗೆ? ಮತ್ತು ಬಿಗ್​​ಬಾಸ್​​ ತಮಗೆ ಏನು ನೀಡಿದೆ ಎಂಬುದರ ಬಗ್ಗೆ ಮಾಜಿ ಸ್ಪರ್ಧಿಗಳು ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಚೈತ್ರಾ ಕುಂದಾಪುರ ಅವರು ಎಲ್ಲರ ಮುಂದೆ ಕಣ್ಣೀರಿಟ್ಟಿದ್ದಾರೆ.

ಬಿಬಿ ಪ್ಯಾಲೇಸ್ ಟಾಸ್ಕ್ ಮುಗಿದ ಬಳಿಕ ಬಿಗ್‌ಬಾಸ್ ಬಗ್ಗೆ ಅತಿಥಿಗಳು ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ. ಮೊದಲು ಮಾತನಾಡಿದ ರಜತ್ ‘ನಾವು ಸತ್ತ ಮೇಲೂ ನಮ್ಮ ವಂಶ ನೋಡುವಂತಹ ನೆನಪುಗಳನ್ನು ಕೊಟ್ಟಿದೆ. ಲವ್ ಯೂ ಬಿಗ್ ಬಾಸ್’ ಎಂದಿದ್ದಾರೆ. ನಂತರ ಎಲ್ಲರೂ ಮಂಜಣ್ಣ ಅಂತ ಪ್ರೀತಿಯಿಂದ ಕರೆಯುತ್ತಾರೆ. ಈ ಶೋ ನನಗೆ ತುಂಬಾ ಕೊಟ್ಟಿದೆ ಅಂತ ಉಗ್ರಂ ಮಂಜು ಹೇಳಿದ್ದಾರೆ. ಬಳಿಕ ಮಾತನಾಡಿದ ಮೋಕ್ಷಿತಾ ಪೈ ‘ಈ ಶೋ ನನಗೆ ತಲೆ ಎತ್ತಿ ನಿಲ್ಲೋ ಹಾಗೆ ಮಾಡಿದೆ’ ಎಂದಿದ್ದಾರೆ. ‘ನನ್ನ ಕರ್ಮಗಳನ್ನ ಕಳೆದಂತಹ ಜಾಗ ಇದು’ ಅಂತ ತ್ರಿವಿಕ್ರಮ್ ಹೇಳಿದ್ದಾರೆ. ಇದಾದ ನಂತರ ‘ಬಿಗ್‌ಬಾಸ್ ಯಾರಿಗೇನು ಕೊಟ್ಟಿದ್ಯೋ ಗೊತ್ತಿಲ್ಲ. ನನಗೆ ಪುನರ್ಜನ್ಮ ಕೊಟ್ಟಿದೆ’ ಅಂತ ಚೈತ್ರಾ ಕುಂದಾಪುರ ಕಣ್ಣೀರಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.