ADVERTISEMENT

BBK12: ಯಾರ ಜೊತೆಗೂ ಮಾತನಾಡದೆ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಚಂದ್ರಪ್ರಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2025, 5:25 IST
Last Updated 10 ನವೆಂಬರ್ 2025, 5:25 IST
<div class="paragraphs"><p>ಚಂದ್ರಪ್ರಭ</p></div>

ಚಂದ್ರಪ್ರಭ

   

ಚಿತ್ರ: ಜಿಯೋ ಹಾಟ್‌ಸ್ಟಾರ್

ಬಿಗ್‌ಬಾಸ್‌ ಮನೆಯಿಂದ ಚಂದ್ರಪ್ರಭ ಹೊರ ಬಂದಿದ್ದಾರೆ. ಕಳೆದ ಸಂಚಿಕೆಯಲ್ಲಿ ತಾವು ಬಯಸಿದಂತೆ ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ವಾರ ಬಿಗ್‌ಬಾಸ್‌ ಮನೆಯಲ್ಲಿ 10 ಮಂದಿ ನಾಮಿನೇಟ್‌ ಆಗಿದ್ದರು. ಚಂದ್ರಪ್ರಭ ನಿನ್ನೆಯ (ಭಾನುವಾರ) ಸಂಚಿಕೆಯಲ್ಲಿ ಕಿಚ್ಚನ ಪಂಚಾಯಿತಿ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮುಖ್ಯದ್ವಾರದ ಮೂಲಕ ಆಚೆ ಹೋಗಲು ಯತ್ನಿಸಿದರು. ಇದನ್ನು ಗಮನಿಸಿದ ಸಹ ಸ್ಪರ್ಧಿಗಳು ಅವರ ಮನವೊಲಿಸಿ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದಾರೆ.

ADVERTISEMENT

ಭಾನುವಾರದ ಸಂಚಿಕೆಯಲ್ಲಿ ಗಿಲ್ಲಿ ಮೇಲೆ ಕೈಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಅವರು ರಿಷಾ ಮನೆಯಲ್ಲೇ ಉಳಿಸಿಕೊಳ್ಳಬೇಕಾ? ಬೇಡವಾ? ಎಂದು ಸ್ಪರ್ಧಿಗಳಿಂದ ಹೇಳಿಕೆ ಪಡೆದುಕೊಳ್ಳುತ್ತಿದ್ದರು. ಆಗ ಚಂದ್ರಪ್ರಭ ಅವರು ಸರದಿ ಬಂದಾಗ ‘ಯಾಕೆ ಹೊರಹೋಗಿದ್ದು’ ಎಂದು ಸುದೀಪ್‌ ಪ್ರಶ್ನೆ ಮಾಡಿದರು. ‘ನನಗೆ ಮನೆಯಲ್ಲಿ ಹೇಗೆ ಇರಬೇಕು ಎಂದು ತಿಳಿಯುತ್ತಿಲ್ಲ, ನನ್ನನ್ನು ಕಳಿಸಿಕೊಡಿ’ ಎಂದು ಚಂದ್ರಪ್ರಭ ಉತ್ತರಿಸಿದ್ದಾರೆ. ಆಗ ಸುದೀಪ್‌ ಅವರು ‘ಇದನ್ನು ನಾವು ತೀರ್ಮಾನಿಸಲ್ಲ. ಜನರಿಗೆ ನೀವು ಇಷ್ಟ ಆಗಲಿಲ್ಲ ಅಂದ್ರೆ, ಅವರೇ ಹೊರಗೆ ಕಳಿಸುತ್ತಾರೆ’ ಎಂದು ಸಮಾಧಾನಪಡಿಸಿದ್ದರು.

ಬಳಿಕ ಸುದೀಪ್ ಅವರು ವೋಟ್‌ ಪ್ರಕಾರ ಒಬ್ಬೊಬ್ಬರಾದ ನಂತರ ಒಬ್ಬರನ್ನು ಎಲಿಮಿನೇಷನ್‌ನಿಂದ ಸೇವ್‌ ಮಾಡುತ್ತಾ ಬಂದರು. ಕೊನೆಯಲ್ಲಿ ಕಾಕ್ರೋಚ್‌ ಸುಧಿ ಮತ್ತು ಚಂದ್ರಪ್ರಭ ಉಳಿದುಕೊಂಡಿದ್ದರು. ಎಲಿಮಿನೇಷನ್‌ ಭೀತಿಯಲ್ಲಿದ್ದ ಕಾಕ್ರೋಚ್‌ ಸುಧಿ ಈ ಹಿಂದೆ ಸಿಕ್ಕಿದ್ದ ವಿಶೇಷ ಪವರ್‌ ಬಳಸಿಕೊಂಡು ಸೇವ್‌ ಆದರು. ಹಾಗಾಗಿ ಬಿಗ್‌ಬಾಸ್‌ ಮನೆಯಿಂದ ಚಂದ್ರಪ್ರಭ ಎಲಿಮಿನೇಟ್‌ ಆದರು. ಕೊನೆಯಲ್ಲಿ ಮನೆಯವರು ಎಷ್ಟೇ ಮಾತನಾಡಿಸಲು ಪ್ರಯತ್ನಿಸಿದರು ಚಂದ್ರಪ್ರಭ ಯಾರ ಜೊತೆಗೂ ಮಾತನಾಡದೆ ಬಿಗ್‌ಬಾಸ್‌ ಮನೆಯಿಂದ ಹೊರಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.