ADVERTISEMENT

BBK 10 | ಸಂಗೀತಾ ಗೆಲ್ಲಬೇಕು, ಕಾರ್ತಿಕ್‌ ಗೆಲ್ತಾರೆ - ಸಿರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2024, 4:58 IST
Last Updated 1 ಜನವರಿ 2024, 4:58 IST
<div class="paragraphs"><p>ಸಿರಿ</p></div>

ಸಿರಿ

   
ಮನೆಯ ಇತರ ಸದಸ್ಯರೆಲ್ಲರೂ ಪರಸ್ಪರ ದೂಷಣೆ, ಹಗ್ಗಜಗ್ಗಾಟದಲ್ಲಿ ತೊಡಗಿಕೊಂಡಿದ್ದರೆ, ‘ನನ್ನ ದಾರಿಯೇ ಬೇರೆ’ ಎನ್ನುವಂತೆ ಶಾಂತರಾಗಿ, ಮನೆಯವರಿಗೆಲ್ಲ ಹಿರಿಯಕ್ಕನಾಗಿ, ಎಲ್ಲರಿಗೂ ಬುದ್ಧಿ ಹೇಳಿ ಸಮಾಧಾನ ಮಾಡುತ್ತ, ನಾಮಿನೇಷನ್‌ ಮಾಡುವಾಗಲೂ ಅಷ್ಟೇ ಸಂಯಮದಿಂದ ಅಭಿಪ್ರಾಯ ತಿಳಿಸುತ್ತ ಬಂದ ಸಿರಿ, 12ನೇ ವಾರಕ್ಕೆ ತಮ್ಮ ಬಿಗ್ ಬಾಸ್‌ ಪಯಣವನ್ನು ಮುಗಿಸಿದ್ದಾರೆ. ಜಿಯೊ ಸಿನಿಮಾಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಪಯಣದ ಕುರಿತು ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿದ್ದಕ್ಕೆ ಬೇಜಾರಿದೆಯಾ?

ನಾನು ಧನಾತ್ಮಕವಾಗಿ ಯೋಚನೆ ಮಾಡುವವಳು. ಫೈನಲ್‌ಗೆ ಇಷ್ಟು ಹತ್ತಿರ ಬಂದು ಬಿಟ್ಟು ಹೋಗುತ್ತಿದ್ದೆನಲ್ಲ ಎಂಬ ಬೇಜಾರಿದೆ. ಆದರೆ ಇಷ್ಟು ವಾರ ಮನೆಯೊಳಗಿದ್ದೆನಲ್ಲ. ಈ ಪಯಣವನ್ನು ಆ ದಿಕ್ಕಿನಿಂದ ನೋಡಿ ಖುಷಿಪಡೋಣ ಅಂದುಕೊಳ್ಳುತ್ತಿದ್ದೇನೆ.

ADVERTISEMENT

ನೀವು ಸೇಫ್‌ ಜೋನಲ್ಲಿದ್ದು ಆಟವಾಡುತ್ತಿದ್ದೀರಾ ಎಂಬ ಮಾತಿದೆ. ಅದು ಎಷ್ಟು ಸರಿ?

ಎಲ್ಲರೂ ನನಗೆ ಸೇಫ್‌ ಜೋನಲ್ಲಿದ್ದಾರೆ ಎನ್ನುತ್ತಿದ್ದರು. ಆದರೆ ಅವರು ಸೇಫ್‌ ಜೋನಲ್ಲಿದ್ದು ನನಗೆ ಹೇಳುತ್ತಿದ್ದರು ಎಂದು ನನಗೆ ಅನಿಸುತ್ತದೆ. ನಾನು ನನ್ನ ಅಭಿಪ್ರಾಯ ಹೇಳುವಲ್ಲಿ ಯಾವತ್ತೂ ಹಿಂಜರಿದಿಲ್ಲ. ನಾನೂ ಪ್ರತಿವಾರ ನಾಮಿನೇಟ್ ಮಾಡ್ತಿದ್ದೆ. ಹಾಗಾಗಿ ಈ ಸೇಫ್ ಅನ್ನೋ ಮಾತನ್ನು ನಾನು ಒಪ್ಪಿಕೊಳ್ಳುವುದೇ ಇಲ್ಲ.

ನಿಮ್ಮದು ಡಿಪ್ಲೋಮೆಟಿಕ್‌ ಸ್ವಭಾವವಾ?

ಹೌದು... ನಾನು ಡಿಪ್ಲೋಮೆಟಿಕ್‌. ಬಿಗ್‌ಬಾಸ್ ಮನೆಯೊಳಗೆ ಎಲ್ಲರೂ ನನ್ನನ್ನು ಡಿಪ್ಲೋಮೆಟಿಕ್ ಅಂದಿರಬಹುದು, ಸೇಫ್‌ ಝೋನ್ ಅಂದಿರಬಹುದು. ಆದರೆ ನಾನು ಮನೆಯಿಂದ ಹೊರಗೆ ಬರುವಾಗ ಹಾಗೆ ಹೇಳಿದವರು ಕಣ್ಣಲ್ಲೂ ನೀರು ನೋಡಿದ್ದೇನೆ. ಹಾಗಾಗಿ ಅವರ ಮನಸ್ಸನ್ನೂ ನಾನು ಗೆದ್ದಿದೀನಿ ಅಂತ ಭಾವಿಸುತ್ತೇನೆ.

ಯಾರು ಜೆನ್ಯೂನ್, ಯಾರು ಫೇಕ್‌?

ಈ ಸೀಸನ್‌ನಲ್ಲಿ ಅತ್ಯಂತ ಜೆನ್ಯೂನ್‌ ಅನಿಸುವುದು ಕಾರ್ತಿಕ್‌. ತುಂಬ ಕಷ್ಟಪಟ್ಟು, ತುಂಬ ಇಷ್ಟಪಟ್ಟು ಆಟ ಆಡುತ್ತಾ ಇದ್ದಾರೆ. ಫೇಕ್‌ ಅಂತ ನಾನು ಹೇಳೋದಿಲ್ಲ. ಆದರೆ ಆಟಕ್ಕೆ ಏನು ಬೇಕೋ, ಹೇಗೆ ಬೇಕೋ ಹಾಗೆ ತಿರುಗೋದು ಅಂದ್ರೆ ಅದು ತುಕಾಲಿ ಸಂತೋಷ್‌.

ನಿಮ್ಮ ಪ್ರಕಾರ ಟಾಪ್‌ 5ನಲ್ಲಿ ಇರುವವರು ಯಾರು?

ಟಾಪ್‌ 5ನಲ್ಲಿ ಕಾರ್ತಿಕ್, ವಿನಯ್‌, ತುಕಾಲಿ ಸಂತೋಷ್ ಮತ್ತು ತನಿಶಾ ಇರಬೇಕು . ಹುಡುಗಿ ವಿನ್ನರ್ ಆದ್ರೆ ನನಗೆ ಖುಷಿಯಾಗುತ್ತದೆ. ಹಾಗೆ ನೋಡಿದರೆ ಸಂಗೀತಾ ಗೆಲ್ಲಬಹುದು ಅನಿಸುತ್ತದೆ. ಆದರೆ ಈಗಿನ ಸನ್ನಿವೇಶ ನೋಡಿದರೆ ಕಾರ್ತಿಕ್‌ ಗೆಲ್ಲಬಹುದು ಅನಿಸುತ್ತದೆ. ಮುಂದಿನ ವಾರ ಡೇಂಜರ್ ಝೋನ್‌ನಲ್ಲಿ ಮೈಕಲ್ ಇರ್ತಾರೆ ಅಂತ ನನ್ನ ಭಾವನೆ.

ಏನನ್ನು ಮಿಸ್‌ ಮಾಡ್ಕೊಳ್ತಿರಾ?

ಬೆಳಗಿನ ಹೊತ್ತಿನ ಹಾಡನ್ನು ಮತ್ತು ಮೈಕ್‌ ಅನ್ನು ಖಂಡಿತ ಮಿಸ್ ಮಾಡ್ಕೋತೀನಿ. ನನ್ನ ಬಿಗ್‌ಬಾಸ್‌ ಪ್ರಯಾಣ ತುಂಬ ಚೆನ್ನಾಗಿತ್ತು. ಸಾಕಷ್ಟು ಏರಿಳಿತಗಳು ಇದ್ದರೂ ಇಷ್ಟು ದೂರ ಬಂದಿರುವುದು ಖುಷಿಕೊಟ್ಟಿದೆ. ಬದುಕಿನಲ್ಲಿ ಒಮ್ಮೆ ಮಾತ್ರ ಇಂಥ ಅನುಭವ ಸಿಗಲು ಸಾಧ್ಯ. ಅದು ನನಗೆ ಸಿಕ್ಕಿದೆ. ಅದಕ್ಕೆ ಖುಷಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.