ADVERTISEMENT

BBK12: ಫಿನಾಲೆಗೆ ಮುನ್ನವೇ ಅಶ್ವಿನಿ ಗೌಡ ಪರ ಅಬ್ಬರದ ಪ್ರಚಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2026, 11:47 IST
Last Updated 9 ಜನವರಿ 2026, 11:47 IST
<div class="paragraphs"><p>ಅಶ್ವಿನಿ ಗೌಡ </p></div>

ಅಶ್ವಿನಿ ಗೌಡ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಫಿನಾಲೆ ದಿನಾಂಕದ ಬಗ್ಗೆ ವಾಹಿನಿ ಅಧಿಕೃತ ಮಾಹಿತಿ ಇನ್ನಷ್ಟೇ ನೀಡಬೇಕಿದೆ. ಹೀಗಿರುವಾಗಲೇ ಬಿಗ್‌ಬಾಸ್‌ ಸ್ಪರ್ಧಿಗಳ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಹೆಚ್ಚು ಮತ ಮಾಡಿ ಎಂದು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ.

ADVERTISEMENT

ಅದರಲ್ಲೂ ಅಶ್ವಿನಿ ಗೌಡ ಅವರ ಪರ ಭರ್ಜರಿ ಪ್ರಚಾರ ನಡೆಯುತ್ತಿದೆ. ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿರುವ ನಟಿ ಅಶ್ವಿನಿ ಗೌಡ ಅವರ ಪರ ಪ್ರಚಾರ ನಡೆಯುತ್ತಿದ್ದು, ಈ ಪ್ರಚಾರದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನಟಿ ಅಶ್ವಿನಿ ಗೌಡ ಅವರ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಒಂದನ್ನು ಹಂಚಿಕೊಳ್ಳಲಾಗಿದೆ. ಕೆಲವು ಕಾರಿನ ಮೇಲೆ ಅಶ್ವಿನಿ ಗೌಡ ಅವರ ಪೋಸ್ಟರ್‌ಗಳನ್ನು ಅಂಟಿಸಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ ಅಶ್ವಿನಿ ಗೌಡ ಅವರ ಮನೆ ಮುಂದೆ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಹಾಕಿ, ‘ಮತ ನೀಡಿ’ ಎಂದು ತಂಡವರು ಪ್ರಚಾರ ಮಾಡುತ್ತಿದ್ದಾರೆ.

ಸದ್ಯ ಬಿಗ್‌ಬಾಸ್ ಮನೆಯಲ್ಲಿ ಧನುಷ್, ದ್ರುವಂತ್, ಅಶ್ವಿನಿ ಗೌಡ, ಗಿಲ್ಲಿ, ರಕ್ಷಿತಾ, ರಘು, ಕಾವ್ಯ, ರಾಶಿಕಾ ಉಳಿದುಕೊಂಡಿದ್ದಾರೆ. ಈ 8 ಮಂದಿ ಪೈಕಿ ಈ ವಾರ ಬಿಗ್‌ಬಾಸ್‌ ಮನೆಯಿಂದ ಯಾವ ಸ್ಪರ್ಧಿ ಹೊರ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.