
ನಟ ಶಿವರಾಜ್‌ಕುಮಾರ್, ಗಿಲ್ಲಿ ನಟ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ ಸೀಸನ್ 12 ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ಭಾನುವಾರದ ಸಂಚಿಕೆಯಲ್ಲಿ ಈ ಬಾರಿಯ ಟ್ರೋಫಿ ಯಾರಿಗೆ ಸೇರಲಿದೆ ಎಂದು ಅಧಿಕೃತವಾಗಿ ಗೊತ್ತಾಗಲಿದೆ. ಇದರ ನಡುವೆ ಬಿಗ್‌ಬಾಸ್ ಮನೆಯಲ್ಲಿರುವ ಟಾಪ್ 6 ಫೈನಲಿಸ್ಟ್‌ಗಳ ಪರ ಪ್ರಚಾರ ಜೋರಾಗಿದೆ.
ಅದರಲ್ಲೂ ಗಿಲ್ಲಿ ನಟನೇ ಗೆಲ್ಲಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ. ವಿಶೇಷ ಏನೆಂದರೆ ನಟ ಶಿವಣ್ಣ ಕೂಡ ಟೇಬಲ್ ತಟ್ಟಿ ‘ಈ ಸಲ ಬಿಗ್‌ಬಾಸ್ ಗಿಲ್ಲಿಯೇ ಗೆಲ್ಲೋದು’ ಎಂದು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಶಿವಣ್ಣ, ‘ನಿಜ ಹೇಳಬೇಕೆಂದರೆ ಗಿಲ್ಲಿ ನಟ ಹೃದಯದಿಂದ ಮಾತನಾಡುತ್ತಾನೆ. ಗಿಲ್ಲಿ ತುಂಬಾ ಪ್ರಾಮಾಣಿಕ ವ್ಯಕ್ತಿ. ಗಿಲ್ಲಿ ಎಲ್ಲೂ ಫೇಕ್ ಅಂತ ನನಗೆ ಅನಿಸಿಲ್ಲ. ಅದೇ ನನಗೆ ಅವನಲ್ಲಿ ಇಷ್ಟ ಆಗಿರುವುದು. ನೇರವಾಗಿ ಮಾತನಾಡುತ್ತಾನೆಂದು ಜನರು ಅವರನ್ನು ಇಷ್ಟ ಪಡುತ್ತಾರೆ. ಕೆಲವರು ಕಂಟೆಂಟ್‌ಗಾಗಿ ಮಾಡ್ತಾರೆ, ಆದರೆ ಗಿಲ್ಲಿ ಸ್ವಾಭಾವಿಕವಾಗಿ ತಮಾಷೆ ಮಾಡಿ ಎಲ್ಲರ ಮನಸ್ಸು ಗೆದ್ದು ಬಿಡ್ತಾನೆ. ಗಿಲ್ಲಿನೇ ಬಿಗ್‌ಬಾಸ್ ಗೆಲ್ಲೋದು’ ಎಂದು ಹೇಳಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಪ್ರಾಪರ್ಟಿ ಕಾಮಿಡಿಯಿಂದಲೇ ಪ್ರಖ್ಯಾತಿ ಪಡೆದುಕೊಂಡಿರುವ ಗಿಲ್ಲಿ, ತನ್ನ ಪಂಚಿಂಗ್ ಡೈಲಾಗ್‌ಗಳ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿದ್ದಾರೆ. ಕಾಮಿಡಿ ಕಿಲಾಡಿಗಳು ವೇದಿಕೆಯಿಂದ ಭರ್ಜರಿ ಬ್ಯಾಚುಲರ್ಸ್ಗೆ ಹೋಗಿ ಫಸ್ಟ್ ರನ್ನರ್ ಅಪ್ ಆಗಿದ್ದರು. ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು
‘ಗಿಲ್ಲಿ ನಟನ ಜೊತೆ ಒಂದು ಸಿನಿಮಾ ಮಾಡೇ ಮಾಡ್ತೀನಿ’ ಅಂತ ಎಲ್ಲರ ಮುಂದೆಯೇ ಘೋಷಿಸಿದ್ದರು. ಇದೀಗ ಗಿಲ್ಲಿ ಅವರ ಬಗ್ಗೆ ನಟ ಶಿವರಾಜ್‌ಕುಮಾರ್ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜೊತೆಗೆ ‘ಗಿಲ್ಲಿಯೇ ಗೆಲ್ಲುವುದು’ ಎಂದು ವಿಶ್ವಾಸದಿಂದ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.