ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ ಮನೆಯಲ್ಲಿ ನಿಗೂಢವಾದ ಶಬ್ದವೊಂದು ಕೇಳಿ ಬಂದಿದ್ದು, ಸ್ಪರ್ಧಿಗಳು ಬೆಚ್ಚಿ ಬಿದ್ದಿದ್ದಾರೆ. ಸದ್ಯ, ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.
ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೊಮೋದಲ್ಲಿ ಎಲ್ಲಾ ಸ್ಪರ್ಧಿಗಳು ಮಂಚದ ಮೇಲೆ ಮಲಗಿಕೊಂಡಿದ್ದರು. ಆಗ ದಿಢೀರನೆ ನಿಗೂಢವಾದ ಶಬ್ದ ಕೇಳಿಸಿದೆ. ಕೂಡಲೇ ಸ್ಪರ್ಧಿಗಳು ಒಬ್ಬೊಬ್ಬರಾಗಿ ಆಚೆ ಬಂದಿದ್ದಾರೆ. ನಂತರ ಮತ್ತೆ ಶಬ್ದವಾಗಿದೆ. ಆಗ ಕೆಲವರು ಅದು ಗೆಜ್ಜೆ ಶಬ್ದ ಎಂದು ಕಂಡು ಹಿಡಿದಿದ್ದಾರೆ. ಬಳಿಕ ಬಿಗ್‌ಬಾಸ್ ಆವರಣಕ್ಕೆ ಒಂದು ನಮಗೆ ಭಯ ಆಗುತ್ತಿದೆ ಬಿಗ್‌ಬಾಸ್ ಬಾಗಿಲನ್ನು ಮುಚ್ಚಿ ಎಂದು ಜಾಹ್ನವಿ ಕೇಳಿಕೊಂಡಿದ್ದಾರೆ.
ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್
ಹೌದು, ಬಿಗ್‌ಬಾಸ್ ಮನೆಯಲ್ಲಿ 17 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅವರಲ್ಲಿ ಕೆಲವರು ಹಾಲ್‌ನಲ್ಲಿ ಮಲಗಿಕೊಂಡರೆ ಇನ್ನು ಕೆಲವರು ಮಲಗುವ ಕೊಣೆಯಲ್ಲಿ ನಿದ್ರೆ ಮಾಡುತ್ತಾರೆ. ಹೀಗೆ ಸ್ಪರ್ಧಿಗಳು ಟಾಸ್ಕ್ ಮುಗಿಸಿ ಮಲಗಿಕೊಂಡಾಗ ಏಕಾಏಕಿ ಗೆಜ್ಜೆ ಶಬ್ದ ಕೇಳಿಸಿದೆಯಂತೆ. ಹೀಗಾಗಿ ಸ್ಪರ್ಧಿಗಳು ನಿದ್ದೆಬಿಟ್ಟು ಭಯದಲ್ಲೇ ಮನೆ ತುಂಬಾ ಓಡಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.